ಬಾವಿಗೆ ಬಿದ್ದು ಕಾಡುಕೋಣ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಡುಕೋಣವೊಂದು ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ಬೆಳಗ್ಗೆ ಪುತ್ತೂರು ತಾಲೂಕಿನ ನರಿಮೊಗರು ಐಟಿಐ ಮೈದಾನದ ಪಕ್ಕದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಪ್ರಕಾಶ್ ಎಂಬವರ ಜಾಗದಲ್ಲಿರುವ ಬಾವಿಯಲ್ಲಿ ಬೆಳಗ್ಗಿನ ಹೊತ್ತು ಕಾಡುಕೋಣವೊಂದು ಬಿದ್ದು ಮೃತಪಟ್ಟಿರುವ ಸ್ಥಿತಿಯಲ್ಲಿ ಕಂಡು ಬಂದಿದೆ.

ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯವರು ಕ್ರೇನ್ ಮುಖಾಂತರ ಕಾಡುಕೋಣವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ.

ಮೃತಪಟ್ಟಿರುವ ಕಾಡುಕೋಣಕ್ಕೆ ಅಂದಾಜು 4 ರಿಂದ 5 ವರ್ಷ ಪ್ರಾಯವಾಗಿರಬಹುದು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಸಿಎಫ್ ಸುಬ್ಬಯ್ಯ ನಾಯ್ಕ, ಆರ್‌ಎಫ್ ಕಿರಣ್, ಡಿವೈಆರ್ ಎಫ್ ಕುಮಾರಸ್ವಾಮಿ ಹಾಗೂ ಪ್ರಸಾದ್ ಕೆ.ಜೆ., ಬೀಟ್ ಫಾರೆಸ್ಟ್ ಸತ್ಯನ್ ಡಿ.ಜಿ., ದೀಪಕ್, ಚಿದಾನಂದ, ಅರಣ್ಯ ವೀಕ್ಷಕ ಶೀನಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಊರವರು ಸಹಕಾರ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!