ದಿಗಂತ ವರದಿ ಯಲ್ಲಾಪುರ :
ಅರಣ್ಯ ವ್ಯಾಪ್ತಿಯಲ್ಲಿ ಜಲ ಮೂಲ ಗಳು ಬತ್ತಿ ಕಾಡು ಪ್ರಾಣಿಗಳು ನೀರು ಆಹಾರ ಅರಸಿ, ನಾಡಿಗೆ ಬರುವುದು ಸಹಜವಾಗಿದ್ದು, ಸೋಮವಾರ ಬೆಳಿಗ್ಗೆ ರಾಮಾಪುರದ ಮಾರ್ಕೊಜಿ ದೇವಸ್ಥಾನದ ಪಕ್ಕದ ಮನೆಗೆ ಕಾಡು ಕುರಿ ಬಂದಿದ್ದು, ಅಸ್ವಸ್ಥ ಗೊಂಡ ಕಾಡು ಕುರಿಯನ್ನು ಅಲ್ಲಿಯ ಜನ ಆರೈಕೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ನಾಯಿಗಳು ಕಾಡು ಕುರಿಯನ್ನುಅಟ್ಟಿಸಿಕೊಂಡು ಬಂದು ತೀವ್ರ ಗಾಯಗೊಳಿಸಿದ್ದವು. ಮಾರ್ಕೋಜಿ ದೇವಸ್ಥಾನದ ಪಕ್ಕದ ಪಾಂಡುರಂಗ ನಾಯ್ಕ ಅವರ ಮನೆಗೆ ಸೋಮವಾರ ಬೆಳಿಗ್ಗೆ ಸುಮಾರು 9ಗಂಟೆಗೆ ಬಂದ ಕಾಡು ಕುರಿಯನ್ನು ರಕ್ಷಿಸಿ ಅರಣ್ಯ ಇಲಾಖೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡು ಕುರಿಯನ್ನು ಮರಳಿ ಕಾಡಿಗೆ ಬಿಟ್ಟಿದ್ದಾರೆ.
ಕಾಡು ಕುರಿಯನ್ನು ನಾಯಿಯಿಂದ ತಪ್ಪಿಸಲು ಸುರೇಶ ನಾಯ್ಕ, ಶಫಿ ತಳ್ಳಿಗೇರಿ, ಕವಿರಾಜ ನಾಯ್ಕ, ಅಕ್ಷತಾ ನಾಯ್ಕ, ನಾಗೇಶ ತಳೇಕರ್ ಮುಂತಾದವರು ಶ್ರಮವಹಿಸಿ ಉಪಚರಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.