ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ಮಹಿಳೆಯೊಬ್ಬರು ವೇಗವಾಗಿ ಬರುತ್ತಿದ್ದ ಬಸ್ಗೆ ಅಡ್ಡ ಬಂದು ಮೃತಪಟ್ಟಿದ್ದಾರೆ.
ಮಗನ ಸ್ಕೂಲ್ ಫೀಸ್ ಕಟ್ಟಲು ಹಣ ಇಲ್ಲ, ಪರಿಹಾರ ಧನ ಸಿಗಬಹುದು ಎಂದು ಭಾವಿಸಿ ಬಸ್ಗೆ ಅಡ್ಡಲಾಗಿ ಬಂದು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಮೃತಪಟ್ಟರೆ ಸರ್ಕಾರದಿಂದ ಪರಿಹಾರ ಸಿಗುತ್ತದೆ ಎಂದು ಮಹಿಳೆ ಯಾರಿಂದಲೋ ಮಾಹಿತಿ ಪಡೆದಿದ್ದರು. ಅದರಂತೆಯೇ ಬಸ್ಗೆ ಅಡ್ಡ ನಿಂತು ಮೃತಪಟ್ಟಿದ್ದಾರೆ. 45 ವರ್ಷದ ಪಾಪತಿ ಪತಿಯನ್ನು ಬಿಟ್ಟು ಮಕ್ಕಳ ಜೊತೆ ಬೇರೆ ಬಂದಿದ್ದರು.
ಮಗನ ಕಾಲೇಜು ಶುಲ್ಕ ಕಟ್ಟಲಾಗದೆ ಖಿನ್ನೆತೆಗೆ ಒಳಗಾಗಿದ್ದ ಮಹಿಳೆ ಈ ರೀತಿ ಮಕ್ಕಳ ಭವಿಷ್ಯ ರೂಪಿಸಲು ಹೋಗಿ ದಾರುಣ ಅಂತ್ಯ ಕಂಡಿದ್ದಾರೆ.