ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಾಗಬೇಕಿದ್ದ ಹುಡುಗನ ಜೊತೆ ವಾಕಿಂಗ್ ತೆರಳಿದ್ದ ಯುವತಿಯ ಮೇಲೆ ಸಾಮೂಹಿ ಅತ್ಯಾಚಾರ ಎಸಗಲಾಗಿದೆ.
ಜಾರ್ಖಂಡ್‌ನ ವೆಸ್ಟ್ ಸಿಂಗ್‌ಭುಮ್‌ನಲ್ಲಿ 22 ವರ್ಷದ ಯುವತಿ ತನ್ನ ಭಾವೀ ಪತಿ ಜೊತೆ ವಾಕಿಂಗ್ ತೆರಳಿದ್ದ ವೇಳೆ ಐವರು ಕಾಮುಕರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಪರ್ಸ್ ಹಾಗೂ ಫೋನ್ ಕದ್ದಿದ್ದಾರೆ.
ಆಕೆಯನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಓಡಿಹೋಗಿದ್ದಾರೆ. ಆಕೆಯ ಫಿಯಾನ್ಸಿ ಹೇಗೋ ತಪ್ಪಿಸಿಕೊಂಡು ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಕಿತ್ತಗುಟ್ಟು ಹಳ್ಳಿಯಿಂದ ಐವರನ್ನು ಅರೆಸ್ಟ್ ಮಾಡಿದ್ದಾರೆ.
ಯುವತಿಯ ಬ್ಯಾಗ್ ಹಾಗೂ ಮೊಬೈಲ್‌ನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ. ಯುವತಿಯನ್ನು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.