SHOCKING | ಉತ್ತರಪ್ರದೇಶದ ಹೊಟೇಲ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ, ದನದ ಮಾಂಸ ತಿನ್ನಿಸಿ ಹಿಂಸೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಬರೇಲಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ನಂತರ ದನದ ಮಾಂಸವನ್ನು ತಿನ್ನಿಸಿ ಚಿತ್ರಹಿಂಸೆ ನೀಡಲಾಗಿದೆ.

ಶೋಯಬ್ ಹಾಗೂ ನಾಜಿಮ್ ಎನ್ನುವ ಆರೋಪಿಗಳು ಇನ್ನೊಬ್ಬ ಮಹಿಳೆಯ ಸಹಾಯದಿಂದ ಕೃತ್ಯವನ್ನು ಎಸಗಿದ್ದಾರೆ. ಮಹಿಳೆ ಆರೋಪಿಗಳನ್ನು ಹೊಟೇಲ್‌ಗೆ ಕರೆಸಿ ನಂತರ ಸಂತ್ರಸ್ತೆಯನ್ನೂ ಹೊಟೇಲ್‌ಗೆ ಬರ ಹೇಳಿದ್ದಾಳೆ. ಸ್ನೇಹಿತೆಯ ಮಾತು ನಂಬಿ ಹೊಟೇಲ್‌ಗೆ ಬಂದ ಸಂತ್ರಸ್ತೆ ಮೇಲೆ ಇಬ್ಬರು ಅತ್ಯಾಚಾರ ಎಸಗಿ ನಂತರ ಬಲವಂತವಾಗಿ ಮಾಂಸ ತಿನ್ನಿಸಿದ್ದಾರೆ.

ಇದನ್ನು ವಿಡಿಯೋ ಮಾಡಿ ಐದು ಲಕ್ಷ ರೂಪಾಯಿಗಾಗಿ ಬೇಡಿಕೆ ಇಟ್ಟಿದ್ದಾರೆ. ಕೊಡದಿದ್ದರೆ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಸಿದ್ದಾರೆ. ಸಂತ್ರಸ್ತೆಗೆ ಈಗಾಗಲೇ ಮದುವೆ ನಿಶ್ಚಯವಾಗಿತ್ತು. ಹಣ ನೀಡಲು ಆಕೆ ಒಪ್ಪದ ಕಾರಣ ವಿಡಿಯೋವನ್ನು ವರನಿಗೆ ಕಳಿಸಿ ಆರೋಪಿಗಳು ಪರಾರಿಯಾಗಿದ್ದಾರೆ.

ಸಂತ್ರಸ್ತೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here