ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಿನ ಕಾಲದಲ್ಲಿ ತೂಕ ಹೆಚ್ಚಿಸಿಕೊಳ್ಳೋದು ತೀರಾ ಸುಲಭ, ಆದರೆ ತೂಕ ಇಳಿಸಿಕೊಳ್ಳೋದು ತುಂಬಾನೇ ಕಷ್ಟ.
ಆದರೆ ಇಲ್ಲೊಬ್ಬ ಮಹಿಳೆ ಇದ್ದಾರೆ ನೋಡಿ, ಜಿಮ್‌ಗೂ ಹೋಗದೇ ಒಂದೇ ವರ್ಷದಲ್ಲಿ ೨೩ ಕೆಜಿ ತೂಕ ಇಳಿಸಿಕೊಂಡಿದ್ದಾರೆ. 90 ಕೆಜಿ ಇದ್ದ ಅವಂತಿಕಾ ಸರನ್ 67 ಕೆಜಿಗೆ ಬಂದಿದ್ದು ಹೇಗೆ?
ಇಡೀ ಆಹಾರ ಪದ್ಧತಿಯ ಬದಲಾವಣೆ, ಗ್ಲುಟನ್ ಇರುವ ಆಹಾರವನ್ನು ಅವಾಯ್ಡ್ ಮಾಡುವುದು. ಹಸುವಿನ ಹಾಲಿನ ಬದಲು ಬಾದಾಮಿ ಹಾಲನ್ನು ಸೇವಿಸುವುದು. ಚಪಾತಿ ಬದಲು ಮಲ್ಟಿಗ್ರೇನ್ ಬ್ರೆಡ್ ತಿಂದಿದ್ದಾರೆ.
ಜೊತೆಗೆ ವಾರದಲ್ಲಿ ಎರಡು ದಿನ ಉಪ್ಪಿಲ್ಲದ ಆಹಾರ, ದಿನಕ್ಕೆ 3.5 ಲೀಟರ್ ನೀರನ್ನು ಕುಡಿಯುತ್ತಾರೆ. ಮೆಂತ್ಯೆ, ಜೀರಿಗೆ, ಸೋಂಪು ಕಾಳುಗಳನ್ನು ಕುದಿಸಿದ ಡೀಕಾಕ್ಸ್ ನೀರನ್ನು ಸೇವಿಸಿದ್ದಾರೆ. ದಿನಕ್ಕೆರಡು ಬಾರಿ ಗ್ರೀನ್ ಟೀ ಹಾಗೂ ದಿನವೂ ಮಜ್ಜಿಗೆ ಕುಡಿಯುತ್ತಾರಂತೆ.
ಮನೆಯಲ್ಲಿ ದಿನವೂ ಯೋಗ, ಏರೋಬಿಕ್ಸ್ ಹಾಗೂ ಊಟದ ನಂತರ ಹತ್ತು ನಿಮಿಷಗಳ ವಾಕ್ ಕಡ್ಡಾಯ ಎಂದು ಅವಂತಿಕಾ ಹೇಳಿದ್ದಾರೆ.