ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರು ಡಿಕ್ಕಿಯಾಗಿ ಪಾದಾಚಾರಿ ಮಹಿಳೆ ಮೃತಪಟ್ಟಿರುವ ಘಟನೆ ನಗರದ ಮಾರತ್‌ಹಳ್ಳಿ ಸಮೀಪದ ಬೋರ್‌ವೆಲ್ ಜಂಕ್ಷನ್‌ನಲ್ಲಿ ನಡೆದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು. ಅದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಲಾದ್ರೂ ಗಾಯಗೊಂಡಿದ್ದ ಮಹಿಳೆ ಕೊನೆಯುಸಿರೆಳೆದಿದ್ದಾರೆ.
ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ ಮಹಿಳೆಯನ್ನು 47 ವರ್ಷದ ರತ್ನಮ್ಮ ಎಂದು ಗುರುತಿಸಲಾಗಿದೆ. ರತ್ನಮ್ಮ ದಿನನಿತ್ಯ ಹೂವು ಮಾರಿಕೊಂಡು ಜೀವನ ನಡೆಸ್ತಿದ್ದರು. ಇಂದು ಬೆಳಗ್ಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರತ್ನಮ್ಮ ಅವರಿಗೆ ಮುಂಭಾಗದಿಂದ ನೆಕ್ಸಾನ್ ಕಾರು ಬಂದು ಡಿಕ್ಕಿಯಾಗಿದೆ. ಎಚ್‌ಎಎಲ್ ಹೆಲಿಕಾಪ್ಟರ್ ಡಿವಿಷನ್‌ನ ಸೀನಿಯರ್ ಮ್ಯಾನೇಜರ್ ಕಿಣಿಗೆ ಸೇರಿದ ಕಾರು ಇದಾಗಿದೆ.
ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಹೆಚ್‌ಎಎಲ್ ಏರ್‌ಪೋರ್ಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.