ಬೀಚ್​ನಲ್ಲಿ ಮಲಗಿದ್ದವರ ಮೇಲೆ ಹರಿದ ಯಮಸ್ವರೂಪಿ ಕಾರು, ಓರ್ವ ಮೃತ್ಯು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಕ್ಷಾ ಚಾಲಕ ಗಣೇಶ್ ಯಾದವ್ ಮುಂಬೈನ ವರ್ಸೋವಾ ಬೀಚ್ ಬಳಿ ಮಲಗಿದ್ದಾಗ ವೇಗವಾಗಿ ಬಂದ ಎಸ್ ಯುವಿ ಕಾರು ಅವರ ಮೇಲೆ ಹರಿದ ಪರಿಣಾಮ ಸಾವನ್ನಪ್ಪಿದ್ದರು. ಇದೀಗ ಈ ಪ್ರಕರಣದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಮುಂಬೈನ ವರ್ಸೋವಾ ಪೊಲೀಸರು ಆಗಸ್ಟ್ 12 ರಂದು ಎಸ್‌ಯುವಿಯಿಂದ 36 ವರ್ಷದ ರಿಕ್ಷಾ ಚಾಲಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಆರೋಪಿ ನಿಖಿಲ್ ಜವಾಲೆ (34) ಮತ್ತು ಆತನ ಸ್ನೇಹಿತ ಶುಭಂ ಡೋಂಗ್ರೆ (33) ಅವರನ್ನು ಬಂಧಿಸಲಾಗಿದ್ದು, ಕೊಲೆಯಲ್ಲದ ಅಪರಾಧಿ ನರಹತ್ಯೆಯ ಪ್ರಕರಣವನ್ನು ದಾಖಲಿಸಲಾಗಿದೆ.

ಇಬ್ಬರನ್ನು ಅಂಧೇರಿಯ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದರೇ ಎಂಬುದನ್ನು ಪತ್ತೆ ಹಚ್ಚಲು ಅವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!