ಹೊಸ ದಿಗಂತ ವರದಿ, ವಿಜಯಪುರ:
ಮದ್ಯಕ್ಕಾಗಿ ಯುವಕನೊಬ್ಬ ಮೊಬೈಲ್ ಟವರ್ ಏರಿ ನಿಂತು ಹುಚ್ಚಾಟ ನಡೆಸಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಚಾಂದಕವಠೆ ಗ್ರಾಮದಲ್ಲಿ ನಡೆದಿದೆ.
ಸತೀಶ ಎಂಬ ಯುವಕ ಟವರ್‌ನ ತುತ್ತ ತುದಿಯಲ್ಲಿ ಏರಿ ನಿಂತು ಮದ್ಯಕ್ಕಾಗಿ ಹುಚ್ಚಾಟ ಮಾಡಿದ್ದು, ಇದರಿಂದ ಪೊಲೀಸರಿಗೆ ಪೀಕಲಾಟ ಆರಂಭ ಆಗಿದೆ.
ಕೆಲ ದಿನಗಳ ಹಿಂದಷ್ಟೆ ಇಲ್ಲಿನ ಪಕ್ಕದ ಗ್ರಾಮದ ಬಳಗಾನೂರು ಗ್ರಾಮದಲ್ಲಿ ಸತೀಶ ಬೆತ್ತಲೆಯಾಗಿ ಟವರ್ ಹತ್ತಿದ್ದನು. ಈಗ ಮತ್ತೆ ಟವರ್ ಏರಿದ್ದಾನೆ. ಅಂದು ಕುಡಿದ ನಶೆಯಲ್ಲಿ ಟವರ್ ಏರಿ ಆತಂಕ ಮೂಡಿಸಿದ್ದನು. ರಾಯಲ್ ಚಾಯ್ಸ್ ವಿಸ್ಕಿ, ವಿಮಲ್ ಗುಟ್ಕಾ ಆಸೆ ತೋರಿಸಿ ಪೊಲೀಸರು ಕೆಳಗಿಳಿಸಿದ್ದರು.
ಸದ್ಯ ಟವರ್ ಏರಿದ ಯುವಕನನ್ನು ನೋಡಲು ನೂರಾರು ಜನರು ಸೇರುವಂತಾಗಿತ್ತು.