ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಯುವಕ ಆತ್ಮಹತ್ಯೆ, ಕುಟುಂಬಕ್ಕೆ ದೊಡ್ಡ ಶಾಕ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಾಳುಮಾತ್ರೆ ಸೇವಿಸಿ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ನಿವಾಸಿ ಬಾಲಾಜಿ ಮೃತಪಟ್ಟಿದ್ದಾನೆ.

ಬಾಲಾಜಿಗೆ ಒಂದು ವರ್ಷದ ಹಿಂದೆ ಇನ್ಸ್ಟಾಗ್ರಾಮ್‌ನಲ್ಲಿ ಕನಕಪುರ ಮೂಲದ ಯುವತಿಯೋರ್ವಳು ಪರಿಚಯವಾಗಿದ್ದಳು. ಹಲವು ಮಾತುಕತೆ ನಂತರ ಸ್ನೇಹ, ಸ್ನೇಹದ ನಂತರ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದರು. ಬಾಲಾಜಿ ಆಕೆಯನ್ನು ತುಂಬಾ ಹಚ್ಚಿಕೊಂಡಿದ್ದ. ಆ ಯುವತಿ ಸಮಯ ಕಳೆದ ನಂತರ ತಾನು ಮತ್ತೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾಳೆ.

ಇದರಿಂದ ಮನನೊಂದ ಬಾಲಾಜಿ ಆಕೆಯ ಮನವೊಲಿಸಲು ಪ್ರಯತ್ನ ಮಾಡಿದ್ದಾನೆ. ಮದುವೆಯಾಗುವಂತೆ ಕೇಳಿದ್ದಾನೆ ಆಕೆ ಒಪ್ಪದ ಕಾರಣ ಬಾಲಾಜಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವಕನ ಕುಟುಂಬಕ್ಕೆ ಮಗನ ಲವ್‌ ವಿಚಾರವೇ ತಿಳಿದಿರಲಿಲ್ಲ. ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!