ಹೊಸ ದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರಿನ ಲಗ್ಗೆರೆಯ ಪಾರ್ವತಿಪುರದಲ್ಲಿ ಭಾನುವಾರ ಮಧ್ಯಾಹ್ನ ವಿದ್ಯುತ್ ವಯರ್ ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಮೊಬೈಲ್ ಟವರ್ ಕಂಬ ತೆರೆವು ಕಾರ್ಯಾಚರಣೆ ವೇಳೆ ಈ ದುರ್ಘಟನೆ ನಡೆದಿದೆ.
ಕ್ರೇನ್ ಆಪರೇಟರ್ಗೆ ಗೈಡ್ ಮಾಡುತ್ತಿದ್ದ ಜೈನ್ ಕುಮಾರ್(20) ಮೃತ ವ್ಯಕ್ತಿ.
ಡಿ.8 ರಂದು ಹಳೇ ಕಟ್ಟಡ ತೆರವು ವೇಳೆ ಗೋಡೆ ಸಮೇತ ಮೊಬೈಲ್ ಟವರ್ ಕಂಬ ನೆರಕ್ಕುರುಳಿತ್ತು. ಇಂದು ಮುರಿದುಬಿದ್ದಿದ್ದ ಟವರ್ ಕಂಬವನ್ನು ತೆರವುಗೊಳಿಸುವಾಗ ವಿದ್ಯುತ್ ಸ್ಪರ್ಶವಾಗಿ ಗಂಭೀರ ಗಾಯಗೊಂಡಿದ್ದರು. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಜೈನ್ ಕುಮಾರ್ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.