ಹೊಸದಿಗಂತ ವರದಿ ವಿಜಯಪುರ:
ನಗರದಲ್ಲಿ ಮುಸುಕುಧಾರಿ ದರೋಡೆಕೋರರ ಗ್ಯಾಂಗ್ ನ ಚಾಕು ಇರಿತದಿಂದ ತೀವ್ರ ಹಲ್ಲೆಗೊಳಗಾಗಿದ್ದ ಯುವಕ ಸಾವಿಗೀಡಾಗಿದ್ದಾನೆ.
ಇಲ್ಲಿನ ಜೈನಾಪುರ ಲೇಔಟ್ ನ ಸಂತೋಷ ಕಾನಾಳ (31) ಮೃತ ಯುವಕ. ಜ. 16 ರಂದು ಮನೆಯಲ್ಲಿ ದರೋಡೆ ಮಾಡುವ ವೇಳೆ ವಿರೋಧಿಸಿದಕ್ಕೆ ಸಂತೋಷಗೆ ಚಾಕುವಿನಿಂದ ಇರಿದು ಮಹಡಿ ಮೇಲಿಂದ ದರೋಡೆಕೋರರು ಕೆಳಗೆ ಎಸೆದಿದ್ದರು.
ಈ ವೇಳೆ ಸಂತೋಷನ ಎದೆ ಹಾಗೂ ಬೆನ್ನಿಗೆ ಚಾಕು ಹಾಕಿ, ಪತ್ನಿ ಭಾಗ್ಯಜ್ಯೋತಿ ಕೊರಳಿದ್ದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ತೀವ್ರ ಗಾಯಗೊಂಡಿದ್ದ ಸಂತೋಷನನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು, ಬಳಿಕ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಕಿಡ್ನಿಗೆ ಸೊಂಕು ತಗುಲಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶಸ್ತ್ರ ಚಿಕಿತ್ಸೆಗೆ 20 ಲಕ್ಷ ಖರ್ಚು ಮಾಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಸಂತೋಷ ಸಾವಿಗೀಡಾಗಿದ್ದಾನೆ.
ಉಸ್ತುವಾರಿ ಸಚಿವರ ಬಳಿ ಜ. 26 ರಂದು ಸಂತೋಷ ಪತ್ನಿ ಭಾಗ್ಯಜ್ಯೋತಿ, ಚಿಕಿತ್ಸೆಗೆ ಸಹಾಯ ಮಾಡುವಂತೆ ಅಳಲು ತೊಡಿಕೊಂಡಿದ್ದರು. ಸಚಿವ ಎಂ ಬಿ ಪಾಟೀಲ, ಪರಿಹಾರದ ಭರವಸೆ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಂತೋಷ ಅಸುನಿಗೀದ್ದಾನೆ.