ಹೊಸದಿಗಂತ ಮುಂಡಗೋಡ:
ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲಿಂದ ಯುವಕನೊಬ್ಬ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದ ಘಟನೆ ಮಂಗಳವಾರ ತಾಲೂಕಿನ ಇಂದೂರ ಗ್ರಾಮದ ಶಿಶನಾಳ ಶರೀಫ್ ದೇವಸ್ಥಾನದ ಹತ್ತಿರ ನಡೆದಿದೆ.
ಹುಲಿಹೊಂಡ ಗ್ರಾಮದ ಸತೀಶ ಮಂಜುನಾಥ ತಳವಾರ (20) ಎಂಬಾತ ಮೃತ ಯುವಕನಾಗಿದ್ದು, ಮಂಗಳವಾರ ಮುಂಡಗೋಡ ಪಟ್ಟಣದ ಫಾರೆಸ್ಟ್ ನರ್ಸರಿಯಿಂದ ಟ್ರಾಕ್ಟರ್‌ನಲ್ಲಿ ಸಸಿಗಳನ್ನು ತುಂಬಿಕೊಂಡು ಹುಲಿಹೊಂಡ ಗ್ರಾಮಕ್ಕೆ ತೆಗೆದುಕೊಂಡು ಹೋಗುವ ವೇಳೆ ಟ್ರ್ಯಾಕ್ಟರ್ ಮೇಲಿನಿಂದ ಯುವಕ ಬಿದ್ದು ಸಾವನ್ನಪ್ಪಿದ್ದಾನೆ.