ಹೊಸದಿಗಂತ , ಮಡಿಕೇರಿ:
ಈಜಲು ತೆರಳಿದ್ದ ಯುವಕನೊಬ್ಬ ಕಾವೇರಿ ನದಿಯಲ್ಲಿ ಮುಳುಗಿ ಸಾವಿಗೀಡಾದ ಘಟನೆ ಶನಿವಾರ ನಡೆದಿದೆ.
ಮೃತನನ್ನು ಚೆಟ್ಟಳ್ಳಿ ಸಮೀಪದ ಕಂಡಕೆರೆ ನಿವಾಸಿ ಶಂಭು ಹಾಗೂ ಮೀನಾ ದಂಪತಿಯ ಪುತ್ರ ಶರತ್ (24) ಎಂದು ಗುರುತಿಸಲಾಗಿದೆ.
ನಂಜರಾಯಪಟ್ಡಣ ಸಮೀಪದ ದಾಸವಾಳ ಎಂಬಲ್ಲಿ ಕಾವೇರಿ ನದಿಯಲ್ಲಿ ಈಜಲೆಂದು ನಾಲ್ವರು ನದಿಗೆ ಇಳಿದಿದ್ದು, ಈ ಪೈಕಿ ಶರತ್ ನೀರು ಪಾಲಾಗಿರುವುದಾಗಿ ಹೇಳಲಾಗಿದೆ.