ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಳ್ಯದ ಬೆಳ್ಳಾರೆ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಆರೋಪಿ ಬೆಳ್ಳಾರೆ ನಿವಾಸಿ ಶಾಫಿ ಬೆಳ್ಳಾರೆಯನ್ನು ನ್ಯಾಯಾಲಯದ ವಾರೆಂಟ್ ಹಿನ್ನಲೆಯಲ್ಲಿ ಎ. 7ರಂದು ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ವೇಳೆ ಪೊಲೀಸ್ ಭದ್ರತೆ ನಡೆವೆಯೇ ಯುವಕನೋರ್ವ ಶಾಫಿ ಬೆಳ್ಳಾರೆಯ ಹಣೆಗೆ ಮುತ್ತಿಟ್ಟ ಘಟನೆ ನಡೆಯಿತು.
2017 ರಲ್ಲಿ ಆರ್.ಎಸ್.ಎಸ್ ಹಾಗೂ ಕಲ್ಲಡ್ಕ ಭಟ್ ವಿರುದ್ಧ ಉದ್ರೇಕಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯ ವಾರೆಂಟ್ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಶಿವಮೊಗ್ಗ ಜೈಲಿನಲ್ಲಿ ಇರಿಸಲಾಗಿದ್ದ ಆರೋಪಿ ಶಾಫಿ ಬೆಳ್ಳಾರೆಯನ್ನು ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಲಾಗಿದೆ.
ಆರೋಪಿ ಸಾಫಿ ಬೆಳ್ಳಾರೆ ಅವರನ್ನು ಪ್ರವೀಣ್ ನೆಟ್ವಾರ್ ಹತ್ಯೆ ಪ್ರಕರಣದಲ್ಲಿ ಎರಡು ವರ್ಷದ ಹಿಂದೆ ಎನ್.ಐ.ಎ ಬಂಧಿಸಿ ನ್ಯಾಯಾಂಗ ಬಂಧನಲ್ಲಿರಿಸಲಾಗಿದೆ. ಈವರೆಗೂ ಜಾಮೀನು ಮಂಜೂರಾಗಿಲ್ಲ. ಕೋರ್ಟ್ ಗೆ ಹಾಜರು ಪಡಿಸಿದ ಅವರನ್ನು ಮತ್ತೆ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ.
ಇತ್ತ ಆರೋಪಿ ಶಾಫಿ ಬೆಳ್ಳಾರೆಯನ್ನು ನ್ಯಾಯಾಲಯಕ್ಕೆ ಕರೆತಂದು ಹಾಜರು ಪಡಿಸಿ ಅಲ್ಲಿಂದ ಪೊಲೀಸ್ ವಾಹನಕ್ಕೆ ಹತ್ತಿಸಲು ಕೇದೊಯ್ಯುತ್ತಿದ್ದ ವೇಳೆ ಬೆಂಬಲಿಗ ಯುವಕನೋರ್ವ ಶಾಫಿ ಬೆಳ್ಳಾರೆಯ ಹಣೆಗೆ ಮುತ್ತಿಟ್ಟ ಘಟನೆ ನಡೆಯಿತು. ಈ ವೇಳೆ ಪೊಲೀಸರು ಯುವಕನ್ನು ಆರೋಪಿಯ ಬಳಿಯಿಂದ ದೂರ ತಳ್ಳಿದರು.