ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಪೋಷಕರು ಮಗನಿಗೆ ಕುಡಿಯಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆದರ್ಶ್ (24) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.
ಕಟಿಂಗ್ ಶಾಪ್ ಹೊಂದಿದ್ದ ಆದರ್ಶ್, ಕೆಲ ದಿನಗಳಿಂದ ಮದ್ಯಪಾನ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದ. ದುಡಿದ ಹಣವನ್ನೆಲ್ಲ ನಿತ್ಯ ಮದ್ಯಕ್ಕೆ ವ್ಯಯಿಸುತ್ತಿದ್ದ. ನಿತ್ಯವೂ ಕುಡಿದು ಮನೆಗೆ ಬರುತ್ತಿದ್ದ ಆತನಿಗೆ ಮನೆಯಲ್ಲಿ ಪೋಷಕರು ಈ ವಿಷಯದ ಬಗ್ಗೆ ಬುದ್ದಿವಾದ ಹೇಳಿದ್ದಾರೆ.
ಮನೆಯಲ್ಲಿ ಈ ಬಗ್ಗೆ ಬೈದಿದ್ದಕ್ಕೆ ಬೇಸರಗೋಡಿದ್ದ ಯುವಕ, ಇದರಿಂದ ಕೋಪಗೊಂಡು ಮನೆಯ ಬಾತ್ ರೂಂನಲ್ಲಿ ಪೈಪ್ ಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಗನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದೆ.