March 31, 2026
Tuesday, March 31, 2026
spot_img

ಎಕ್ಸ್‌ ಗರ್ಲ್‌ಫ್ರೆಂಡ್‌ ಅಂದುಕೊಂಡು ಇನ್ಯಾವುದೋ ಯುವತಿ ಮೇಲೆ ಆ್ಯಸಿಡ್‌ ಎರಚಿದ ಯುವಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಡೆದುಕೊಂಡು ಹೋಗುತ್ತಿದ್ದ ಯುವತಿ ಮೇಲೆ ಯುವಕನೊಬ್ಬ ಆ್ಯಸಿಡ್ ದಾಳಿ ಮಾಡಿ ಪರಾರಿಯಾಗಿದ್ದಾನೆ.

ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಎಕ್ಸ್‌ಗರ್ಲ್‌ಫ್ರೆಂಡ್‌ ಎಂದುಕೊಂಡ ಯುವಕ ಹಿಂಬದಿಯಿಂದ ಬಂದು ಬೇರ್ಯಾವುದೋ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ.

ತನ್ನದಲ್ಲದ ತಪ್ಪಿಗೆ, ಏನನ್ನೂ ಅರಿಯದ ಯುವತಿಯ ಜೀವನವೇ ಹಾಳಾಗಿ ಹೋಗಿದೆ. ಸದ್ಯ ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿಯ ಎಕ್ಸ್‌ ಗರ್ಲ್‌ಫ್ರೆಂಡ್‌ ಹಾಗೂ ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಒಂದೇ ರೀತಿಯ ಬಟ್ಟೆಯನ್ನು ಹಾಕಿದ್ದರು. ಇದರಿಂದಾಗಿ ಆಕೆ ಎಂದು ತಿಳಿದುಕೊಂಡು ಆ್ಯಸಿಡ್ ದಾಳಿ ನಡೆದಿರಬಹುದು. ಭುಜ, ಕೆನ್ನೆ, ಕುತ್ತಿಗೆ ಹಾಗೂ ತೋಳುಗಳಿಗೆ ಗಂಭೀರ ಗಾಯಗಳಾಗಿವೆ. ಆ್ಯಸಿಡ್ ದಾಳಿ ನಡೆಸಿದ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !