ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ನಲ್ಲಿ ಟ್ರಾಫಿಕ್ ಸಿಗ್ನಲ್ ನಿಲ್ಲಿಸದ ಯುವಕನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.
ನಾಂಟೆರ್ರೆಯಲ್ಲಿ ಪೊಲೀಸರು ಗುಂಡು ಹಾರಿಸಿದ್ದು, ಆಕ್ರೋಶ ಭುಗಿಲೆದ್ದಿದೆ. ಸಿಟ್ಟಿಗೆದ್ದ ಸಾರ್ವಜನಿಕರು ರಸ್ತೆಗಳಲ್ಲಿ ಸಿಕ್ಕಸಿಕ್ಕ ಕಾರುಗಳಿಗೆ ಬೆಂಕಿ ಇಡುತ್ತಿದ್ದಾರೆ.
ಪ್ರತಿಭಟನೆ ಇದೀಗ ಹಿಂಸಾಚಾರ ರೂಪ ಪಡೆದಿದ್ದು,ಕಟ್ಟಡಗಳು, ಕಾರುಗಳು ಬೆಂಕಿಗಾಹುತಿಯಾಗುತ್ತಿವೆ. ಪೊಲೀಸರ ಮೇಲೆ ಪಟಾಕಿಗಳನ್ನು ಜನ ಎಸೆಯುತ್ತಿದ್ದಾರೆ. ಯುವಕನನ್ನು ಕೊಂದ ಅಧಿಕಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಕಷ್ಟು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.