ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೀತಿಸಿದ ಹುಡುಗಿ ಬೇಡ ಅಂತ ಕೈಕೊಟ್ಟಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣಾಗಿದ್ದಾನೆ. ಸಾವಿಗೂ ಮುನ್ನ ವಿಡಿಯೋ ಮಾಡಿ ಸಾವಿನ ಸತ್ಯವನ್ನು ರಿವೀಲ್ ಮಾಡಿದ್ದಾನೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರದಲ್ಲಿ ಈ ಘಟನೆ ನಡೆದಿದೆ. ಹುಡುಗಿ ಬಿಟ್ಟು ಹೋದ ಕಾರಣಕ್ಕೆ ಆತ ಭೂಮಿಯನ್ನೇ ಬಿಟ್ಟು ಹೋಗಿದ್ದಾನೆ. ದುಡುಕಿನ ನಿರ್ಧಾರ ತೆಗೆದುಕೊಂಡು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರದಲ್ಲಿ 24 ವರ್ಷದ ಯುವಕ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಮನಕಲಕುವ ದೃಶ್ಯವನ್ನು ಸೃಷ್ಟಿಸಿದೆ. ಪ್ರೀತಿಯಲ್ಲಿ ಕೈಕೊಟ್ಟ ಯುವತಿಯೇ ತನ್ನ ಸಾವಿಗೆ ಕಾರಣ ಎಂದು ಆರೋಪಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಡಿಯೋ ಮಾಡಿ ವಾಟ್ಸಾಪ್ ಸ್ಟೇಟಸ್ಗೆ ಹಾಕಿದ್ದಾನೆ. ಆತನ ಸಾವಿನ ಹಿಂದಿನ ಕಾರಣಗಳನ್ನು ಬಿಚ್ಚಿಟ್ಟಿದ್ದಾನೆ. ನೇಣಿಗೆ ಶರಣಾಗುವ ಮುನ್ನ ವೀಡಿಯೊ ಮಾಡಿ ವಾಟ್ಸ್‌ಆಪ್ ಸ್ಟೇಟಸ್‌ನಲ್ಲಿ ತಮ್ಮಿಬ್ಬರ ಫೋಟೋಗಳೊಂದಿಗೆ ಹಂಚಿಕೊಂಡಿದ್ದಾರೆ. ಸಂತೋಷ್ ಸಾಯುವ ಮುನ್ನ ಆತನ ಕಥೆಯನ್ನು ಮತ್ತು ನಡೆದ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವಂತೆ ಮಾಡಿದ್ದಾನೆ.