ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿಯ ಅರಿಶಿಣ ಗುಂಡಿ ಜಲಪಾತವನ್ನು ವೀಕ್ಷಿಸುತ್ತಿದ್ದ ಯುವಕನೊಬ್ಬ ಕಾಲುಜಾರಿ ಬಿದ್ದು ನೀರುಪಾಲಾಗಿದ್ದಾರೆ.
ಈ ವಿಡಿಯೋ ಎಲ್ಲೆಡೆ ಆಗಿದ್ದು, ಜಲಪಾತದ ಬಳಿ ಎಷ್ಟು ಕಾಳಜಿ ವಹಿಸಿದರೂ ಸಾಲದು ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ಕೊಲ್ಲೂರಿನ ಬಳಿ ಇರುವ ಜಲಪಾತವನ್ನು ನೋಡಲು ಭದ್ರಾವತಿ ಮೂಲದ ಯುವಕ ಶರತ್ ಕುಮಾರ್ ಆಗಮಿಸಿದ್ದು, ಕಾಲುಜಾರಿ ಬಿದ್ದಿದ್ದಾರೆ. ಯುವಕನ ಪತ್ತೆಗೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.
Udupi: A 23-year- old man fell into Arishina Gundi Falls near Kollur, search operation underway.#Udupi #ViralVideo pic.twitter.com/zpVgT0J5xE
— TIMES NOW (@TimesNow) July 24, 2023