ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಕಾರಿಗೆ ಒರಗಿ ನಿಂತಿದ್ದ ಆರು ವರ್ಷದ ಬಾಲಕನಿಗೆ ಕಾರಿನ ಚಾಲಕ ಎದೆಗೆ ಒದ್ದಿದ್ದಾನೆ. ಕೇರಳದ ತಿರುವನಂತಪುರಂನಲ್ಲಿ ಘಟನೆ ನಡೆದಿದ್ದು, ಬಾಲಕನಿಗೆ ಒದ್ದಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬಾಲಕ ಕಾರಿಗೆ ಒರಗಿ ನಿಂತಿದ್ದಾನೆ, ಅದಕ್ಕೆ ಚಾಲಕ ಕಾರಿನಿಂದ ಕೆಳಗಿಳಿದು ಬಂದು, ನಿಂದಿಸಿ ಕಾಲಿನಿಂದ ಜಾಡಿಸಿ ಎದೆಗೆ ಒದ್ದಿದ್ದಾನೆ. ಬಾಲಕನಿಗೆ ಏನೂ ತಿಳಿದಿಲ್ಲ. ಹೆದರಿ ದೂರ ಸರಿದಿದ್ದಾನೆ. ನಂತರ ಸ್ಥಳೀಯರು ಈ ಘಟನೆ ವೀಕ್ಷಿಸಿದ್ದು, ಚಾಲಕನ ಬಳಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜಸ್ಥಾನದ ವಲಸೆ ಕಾರ್ಮಿಕರ ಕುಟುಂಬದ ಬಾಲಕನಿಗೆ ಕಾರು ಚಾಲಕ ಥಳಿಸಿ ದರ್ಪ ತೋರಿದ್ದಾನೆ. ವಕೀಲರೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಶಿಹಶಾದ್ ವಿರುದ್ಧ ಪ್ರಕರಣ ದಾಖಲಾಗಿದೆ. ಠಾಣೆಗೆ ಆತನನ್ನು ಕರೆಸಿ ತಕ್ಷಣವೇ ಬಿಡುಗಡೆ ಮಾಡಲಾಗಿದೆ.
ಆದರೆ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಮತ್ತೆ ಪೊಲೀಸರು ಆತನ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಕಾರಿಗೆ ಒರಗಿದ್ದ ಪುಟ್ಟ ಕಾರಣಕ್ಕಾಗಿ ಮಾನವೀಯತೆ ಇಲ್ಲದೆ ಒದ್ದ ಚಾಲಕನಿಗೆ ಕಠಿಣ ಶಿಕ್ಷೆ ಸಿಗಲಿ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.