ಹೊಸದಿಗಂತ ವರದಿ,ಗದಗ :
ಕುರಿಗಳನ್ನು ಮೇಯಿಸಲು ಹೋಗಿದ್ದ ಬಾಲಕನೊಬ್ಬ ಸಿಡಿಲು ಬಡಿದು ಸಾವುನ್ನಪ್ಪಿರುವ ಘಟನೆ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಬಳಿ ಜರುಗಿದೆ.
ಗುರುವಾರ ಸಂಜೆ ಆರಂಭವಾದ ಗುಡುಗು ಸಹಿತ ಆರಂಭವಾದ ಮಳೆಯಿಂದ ತಪ್ಪಿಸಿಕೊಳ್ಳಲು ಕುರಿ ಕಾಯುವ ಬಾಲಕ ನರಗುಂದ ಪಟ್ಟಣದ ಗುಡ್ಡದಕೇರಿ ಬಡಾವಣೆಯ ರಮೇಶ ಕಿಲೀಕೈ (೧೭) ರಕ್ಷಣೆಗಾಗಿ ಮರದ ಕೆಳಗೆ ನಿಂತಾಗ ಆಕಸ್ಮಿಕವಾಗಿ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.