ಬೆಂಗಳೂರಿನಲ್ಲಿ ಪೆಟ್ರೋಲ್‌ ಸುರಿದು ಟೆಕ್ಕಿ ಯುವತಿ ಆತ್ಮಹತ್ಯೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಹೆಚ್‌ಎಎಲ್‌ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲ್ ಸುರಿದುಕೊಂಡು ಟೆಕ್ಕಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಸುಹಾಸಿ ಸಿಂಗ್ (24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಯುವತಿಯ ಖಾಸಗಿ ವಿಡಿಯೋ ಲೀಕ್ ಮಾಡುವ ಬೆದರಿಕೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಜ.12 ರಂದು ಹೋಟೆಲಿನಲ್ಲಿ ಯುವತಿ ಪೆಟ್ರೋಲ್‌ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಗಂಭೀರ ಗಾಯಗೊಂಡಿದ್ದ ಯುವತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುಹಾಸಿ ಮೃತಪಟ್ಟಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಮಾವ ಪ್ರವೀಣ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಸುಹಾಸಿ ಸಿಂಗ್‌ ಮತ್ತು ಪ್ರವೀಣ್‌ ಸಿಂಗ್‌ ಸಂಬಂಧಿಗಳು. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಉತ್ತಮ ಸಂಬಂಧ ಬೆಳೆದಿದೆ. ಇಬ್ಬರು ಒಟ್ಟಿಗೆ ಹೊರಗಡೆ ಹೋಗುತ್ತಿದ್ದರು. ಹೀಗೆ ಹೊರಗಡೆ ಹೋಗಿದ್ದಾಗ ಲೈಂಗಿಕ ಕ್ರಿಯೆ ನಡೆಸಿದ್ದಾರೆ.

ಇಬ್ಬರು ಹಲವಾರು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರವೀಣ್‌ ಸಿಂಗ್‌ ವಿಡಿಯೋ ರೆಕಾರ್ಡ್‌ ಮಾಡಿದ್ದಾನೆ. ನಂತರ ವಿಡಿಯೋವನ್ನು ಇಟ್ಟುಕೊಂಡು ಸುಹಾಸಿಯನ್ನು ಬ್ಲ್ಯಾಕ್‌ ಮೇಲ್‌ ಮಾಡಿ ಲೈಂಗಿಕ ಕ್ರಿಯೆಗೆ ಬರುವಂತೆ ಆಹ್ವಾನಿಸುತ್ತಿದ್ದ. ಒಂದು ವೇಳೆ ಸಹಕರಿಸದೇ ಇದ್ದರೆ ವಿಡಿಯೋವನ್ನು ಪೋಷಕರಿಗೆ ತಿಳಿಸುವುದಾಗಿ ಬೆದರಿಸುತ್ತಿದ್ದ. ಬೆದರಿಕೆಗೆ ಬಗ್ಗಿ ಪ್ರವೀಣ್‌ ಹೇಳಿದಾಗ ಸುಹಾಸಿ ಬರುತ್ತಿದ್ದಳು.

ಕೆಲ ತಿಂಗಳಿನಿಂದಲ ಸುಹಾಸಿ ಸಿಂಗ್‌ ಬೇರೊಬ್ಬ ಹುಡುಗನ ಜೊತೆ ಸುತ್ತಾಟ ಆರಂಭಿಸಿದ್ದಳು. ಈ ವಿಚಾರ ಪ್ರವೀಣ್‌ಗೆ ಗೊತ್ತಾಗಿದೆ. ಜನವರಿ 12 ರಂದು ಪ್ರವೀಣ್‌ ಹೋಟೆಲಿಗೆ ಬರುವಂತೆ ಆಹ್ವಾನಿಸಿದ್ದಾನೆ. ಈ ಆಹ್ವಾನವನ್ನು ಆಕೆ ತಿರಸ್ಕರಿಸಿದ್ದಾಳೆ. ಈ ವೇಳೆ ಪ್ರವೀಣ್‌ ಬಾರದೇ ಇದ್ದರೆ ವಿಡಿಯೋ ವೈರಲ್‌ ಮಾಡುತ್ತಿದ್ದೇನೆ ಎಂದು ಬೆದರಿಸಿದ್ದಾನೆ.

ಈತನ ಬ್ಲ್ಯಾಕ್‌ಮೇಲ್‌ಗೆ ಹೆದರಿ ಸುಹಾಸಿ ಎಚ್‌ಎಎಲ್‌ ಬಳಿ ಹೋಟೆಲಿಗೆ ಪೆಟ್ರೋಲ್‌ ಜೊತೆ ಬಂದಿದ್ದಾಳೆ. ಪ್ರವೀಣ್‌ ನೋಡಿ ಹೋಟೆಲಿನಲ್ಲೇ ಪೆಟ್ರೋಲ್‌ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಪ್ರವೀಣ್‌ ಆಕೆಯನ್ನು ರಕ್ಷಿಸಿದ್ದಾನೆ. ಗಂಭೀರ ಗಾಯಗೊಂಡ ಸುಹಾಸಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಪ್ರಕರಣ ತಿಳಿದ ಬಳಿಕ ಪ್ರವೀಣ್‌ನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!