ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಾಸಗಿ ಫೋಟೊಗಳನ್ನು ಲೀಕ್ ಮಾಡುತ್ತೇನೆ ಎಂದು ಪ್ರಿಯಕರ ಹೆದರಿಸಿದ್ದು, ಭಯಪಟ್ಟ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬೆಂಗಳೂರಿನಲ್ಲಿ ವಾಸವಿದ್ದ ಅವಿನಾಶ್ ಹಾಗೂ ಆಶಾ ಐದು ವರ್ಷದಿಂದ ಪ್ರೀತಿಯಲ್ಲಿದ್ದರು, ಮಾಲ್ ಒಂದರಲ್ಲಿ ಆಶಾ ಕೆಲಸ ಮಾಡುತ್ತಿದ್ದರು. ಅವಿನಾಶ್ ಜೊತೆಯಲ್ಲಿ ಓಡಾಡುತ್ತಿರುವ ವಿಷಯ ಆಶಾ ಮನೆಗೆ ತಿಳಿದಿದ್ದು, ಬ್ರೇಕಪ್ ಮಾಡಿಕೊಳ್ಳಲು ಹೇಳಿದ್ದರು. ಈ ವಿಷಯವನ್ನು ಆಶಾ ಅವಿನಾಶ್ ಬಳಿ ಹೇಳಿದ್ದಳು.
ಅವಿನಾಶ್ ಇದರಿಂದ ಸಿಟ್ಟಾಗಿದ್ದು, ಬ್ರೇಕಪ್ಗೆ ಒಪ್ಪಿಲ್ಲ. ನನ್ನನ್ನು ಬಿಟ್ಟು ಹೋಗುವಂತಿಲ್ಲ ಬಿಟ್ಟು ಹೋದರೆ ನಮ್ಮ ಪರ್ಸನಲ್ ಫೋಟೊಗಳನ್ನು ಲೀಕ್ ಮಾಡುತ್ತೇನೆ ಎಂದಿದ್ದಾನೆ. ಇದರಿಂದ ಹೆದರಿದ ಆಶಾ ಮನೆಯವರಿಗೂ ಹೇಳಲಾಗದೆ, ಬಾಯ್ಫ್ರೆಂಡ್ಗೂ ಅರ್ಥಮಾಡಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.