ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೋನಿನಲ್ಲಿ ಮಾತನಾಡುತ್ತಾ, ಮಾತಿನ ಮಧ್ಯೆ ಕಣಗಿಲೆ ಹೂವನ್ನು ಹಾಗೂ ಎಲೆಯನ್ನು ಕಿತ್ತು ತಿಂದ ಯುವತಿ ಮೃತಪಟ್ಟಿದ್ದಾಳೆ.
ಕೇರಳದ ಸೂರ್ಯ ಸುರೇಂದ್ರನ್ ಎಂಬ ಯುವತಿ ತಮ್ಮದೇ ಮನೆಯ ಮುಂದೆ ಹಾಕಿದ್ದ ಗಿಡದ ಹೂವು ತಿಂದು ಮೃತಪಟ್ಟಿದ್ದಾರೆ. ಸೂರ್ಯ ನರ್ಸ್ ಕೆಲಸ ಮಾಡುತ್ತಿದ್ದು, ಯುಕೆಯಲ್ಲಿ ಹೊಸ ಕೆಲಸಕ್ಕೆ ಸೇರಿಕೊಂಡಿದ್ದರು.
ಅಲ್ಲಿಗೆ ತೆರಳಲು ಏರ್‌ಪೋರ್ಟ್‌ಗೆ ಬಂದಿದ್ದ ಸೂರ್ಯ ಏಕಾಏಕಿ ಕುಸಿದುಬಿದ್ದಿದ್ದಾರೆ. ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಆಕೆಯ ಸಾವಿಗೆ ಕಾರಣ ಹೃದಯಾಘಾತ ಎಂದು ಘೋಷಿಸಲಾಗಿದೆ.
ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಆಕೆಯ ರಕ್ತದಲ್ಲಿ ವಿಷಕಾರಿ ಅಂಶ ಕಂಡುಬಂದಿದೆ ಎಂದು ಬಹಿರಂಗಪಡಿಸಿದ್ದಾರೆ.