ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಚಾಮರಾಜನಗರದ ಉಮ್ಮತ್ತೂರಿನಲ್ಲಿ ಕರಕುಶಲ ಉದ್ಯಮ ನಡೆಸುತ್ತಿರುವ ವರ್ಷಾ ಎಂಬ ಯುವತಿಗೆ ಆಹ್ವಾನಿಸಲಾಗಿದೆ.
ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಇಂದು(ಜೂ.09) ರಾಷ್ಟ್ರಪತಿ ಭವನದಲ್ಲಿ ಸಂಜೆ 7:15 ರ ಸುಮಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆ ಈಗಾಗಲೇ ಗಣ್ಯಾತಿ ಗಣ್ಯರ ಆಗಮನ ಶುರುವಾಗಿದೆ.
ಇತ್ತ ಮೋದಿ ಅವರ ಮನ್‌ಕಿ ಬಾತ್ನಿಂದ ಪ್ರೇರಣೆಗೊಂಡು ಕರಕುಶಲ ಉದ್ಯಮ ಆರಂಭಿಸಿದ್ದ ವರ್ಷಾ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಅನುಪಯುಕ್ತ ಬಾಳೆ ದಿಂಡಿನಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಉದ್ಯಮ ನಡೆಸುತ್ತಿರುವ ವರ್ಷಾ, ಹಲವು ಮಹಿಳೆಯರಿಗೆ ಉದ್ಯಮ ನೀಡುವ ಜೊತೆಗೆ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ವರ್ಷಾ ಸಾಧನೆಯ ಬಗ್ಗೆಯು ಮನ್.ಕಿ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವೋಕಲ್ ಫಾರ್ ಲೋಕಲ್ ಎಂದು ಪ್ರಶಂಸಿದ್ದರು. ಇದೀಗ ವರ್ಷಾ ಅವರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು, ಈಗಾಗಲೇ ದೆಹಲಿ ತಲುಪಿದ್ದಾರೆ.
ಮೋದಿ ಅವರು ಆಕಾಶವಾಣಿಯಲ್ಲಿ ಪ್ರತಿ ತಿಂಗಳು ನಡೆಸಿಕೊಡುವ ಮನ್ ಕಿ ಬಾತ್ ಕಾರ್ಯಕ್ರಮವೊಂದರಲ್ಲಿ 2023 ನವೆಂಬರ್ 27 ರಂದು ವರ್ಷಾ ಅವರಿಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ವರ್ಷಾ ಅವರು ಅಲಂಕಾರಿಕ ವಸ್ತುಗಳು ಮತ್ತು ವ್ಯಾನಿಟಿ ಬ್ಯಾಗ್ ನಂತಹ ವಸ್ತುಗಳ ಉತ್ಪಾದನೆ ಮಾಡುತ್ತಾ ಸ್ವಾವಲಂಬಿ ಆಗುವುದರ ಜೊತೆಗೆ ಹಲವರಿಗೆ ಉದ್ಯೋಗವನ್ನೂ ನೀಡಿದ್ದಾರೆ. ವೋಕಲ್ ಫಾರ್ ಲೋಕಲ್ನಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.