ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವತಿಯರೇ ಆನ್‌ಲೈನ್ ಡೇಟಿಂಗ್ ಆಪ್‌ನಲ್ಲಿ ಸಿಗುವ ಗಂಡಸರನ್ನು ನಂಬುವ ಮೊದಲು ಎಚ್ಚರವಾಗಿರಿ! ಗುರುಗ್ರಾಮದಲ್ಲಿ ಆಪ್ ನಂಬಿ ಹುಡುಗನನ್ನು ಭೇಟಿಯಾಗಲು ತೆರಳಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
ಆನ್‌ಲೈನ್ ಡೇಟಿಂಗ್ ಆಪ್‌ನಲ್ಲಿ ಇಬ್ಬರು ಭೇಟಿಯಾಗಿದ್ದು, ಹೊಟೇಲ್‌ನಲ್ಲಿ ಭೇಟಿಯಾಗೋಣ ಎಂದು ಯುವಕ ಹೇಳಿದ್ದಾನೆ. ಇದನ್ನು ಒಪ್ಪಿ ಆಕೆ ಹೊಟೇಲ್‌ಗೆ ಬಂದಿದ್ದಾಳೆ. ನಂತರ ತಿನ್ನಲು ಸ್ನ್ಯಾಕ್ಸ್ ನೀಡಿದ್ದಾರೆ. ಇದನ್ನು ತಿಂದ ನಂತರ ಆಕೆ ಪ್ರಜ್ಞೆ ತಪ್ಪಿದ್ದಾಳೆ.
ನಂತರ ಆಕೆಯ ಮೇಲೆ ಯುವಕ ಹಾಗೂ ಆತನ ಸ್ನೇಹಿತ ಅತ್ಯಾಚಾರ ಎಸಗಿದ್ದಾರೆ. ಇದನ್ನು ವಿಡಿಯೋ ಕೂಡ ಮಾಡಿದ್ದಾರೆ. ನಂತರ ಅತ್ಯಾಚಾರದ ವಿಡಿಯೋ ತೋರಿಸಿ ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ.ಯುವತಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.