ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮೇಲೆ ಹತ್ತು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
26 ವರ್ಷದ ಎಂಜಿನಿಯರ್ ವರ್ಕ್ ಫ್ರಂ ಹೋಂನಲ್ಲಿದ್ದರು. ಸಂಜೆ ವೇಳೆ ಬಾಯ್ಫ್ರೆಂಡ್ ಜತೆ ಬೈಕ್ನಲ್ಲಿ ತೆರಳಿದ್ದು, ಹತ್ತು ಮಂದಿಯ ಗುಂಪು ಅಡ್ಡ ಹಾಕಿ ಕೆಳಗೆ ಇಳಿಯುವಂತೆ ಹೇಳಿದೆ.
ನಂತರ ಬಾಯ್ಫ್ರೆಂಡ್ನ್ನು ಚೆನ್ನಾಗಿ ಥಳಿಸಿ, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.
ಆಕೆಯನ್ನು ಅಲ್ಲೇ ಬಿಟ್ಟು ಫೋನ್ ಹಾಗೂ ಪರ್ಸ್ ತೆಗೆದುಕೊಂಡು ಹೋಗಿದ್ದಾರೆ. ಯುವತಿ ಮನೆ ತಲುಪಿ, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆರೋಪಿಗಳು ಇನ್ನೂ ಸಿಕ್ಕಿಬಿದ್ದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.