March 31, 2026
Tuesday, March 31, 2026
spot_img

ಮದುವೆಯಾಗೋಕೆ ಇಷ್ಟವಿಲ್ಲದೆ ಸಂಪೂರ್ಣವಾಗಿ ತಲೆ ಕೂದಲು ತೆಗೆಸಿಕೊಂಡ ಯುವತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಂದೆ ತಾಯಿ ಮದುವೆಯಾಗೋಕೆ ಹೇಳ್ತಿದ್ದಾರೆ ಆದರೆ ಮದುವೆಯಾಗೋಕೆ ಇಷ್ಟವಿಲ್ಲ ಎಂದು ಯುವತಿಯೊಬ್ಬಳು ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆಸಿಕೊಂಡಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಯುವತಿಯ ವಿಡಿಯೋ ವೈರಲ್‌ ಆಗಿದೆ. ಮನೆಯಲ್ಲಿ ಬೇಡ ಎಂದು ಎಷ್ಟು ಹೇಳಿದರೂ ಮದುವೆಯಾಗಲೇಬೇಕು ಎಂದು ಒತ್ತಾಯಿಸಿದ್ದಾರೆ. ಕೂದಲಿಲ್ಲದ ಬೋಡು ಹುಡುಗಿಯನ್ನು ಯಾರೂ ಮದುವೆಯಾಗೋಕೆ ಒಪ್ಪೋದಿಲ್ಲ ಎನ್ನುವ ನಂಬಿಕೆಯಿಂದ ಯುವತಿ ಕೂದಲನ್ನು ಬೋಳಿಸಿಕೊಂಡು ವಿಡಿಯೋ ಮಾಡಿ ಅಪ್‌ಲೋಡ್‌ ಮಾಡಿದ್ದಾಳೆ.

ಪ್ರತೀ ಹೆಣ್ಣುಮಗುವಿಗೂ ಕೂದಲು ಎಂದರೆ ಇಷ್ಟವಿರುತ್ತದೆ. ಚೆನ್ನಾಗಿ ಬೆಳೆಯಲಿ ಎಂದು ಕೂದಲಿಗಾಗಿ ಏನೆಲ್ಲಾ ಮಾಡುತ್ತಾರೆ. ಕೂದಲನ್ನು ಸಂಪೂರ್ಣ ಬೋಳಿಸುವುದು ಕೂಡ ಬೋಲ್ಡ್‌ ಡಿಸಿಶನ್‌ ಆಗಿದೆ. ನನಗೆ ಕೂದಲು ಇಷ್ಟ, ಕಟ್‌ ಮಾಡೋಕೆ ಇಷ್ಟ ಇರಲಿಲ್ಲ. ಆದರೆ ನನಗೆ ಬೇರೆ ದಾರಿ ಇಲ್ಲ. ಮನೆಯವರು ಮದುವೆಗೆ ಒತ್ತಾಯಿಸುತ್ತಿದ್ದಾರೆ. ಅದಕ್ಕಾಗಿ ಹೀಗೆ ಮಾಡಿದೆ ಎಂದು ಹೇಳಿದ್ದಾಳೆ.

@kajals_move_ ಎಂಬುವವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಕ್ಲಿಪ್ ಅನ್ನು ಈಗಾಗಲೇ ಸುಮಾರು 3.7 ಲಕ್ಷ ಮಂದಿ ವೀಕ್ಷಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !