ಉಚಿತ ಆಧಾರ್ ಅಪ್‌ಡೇಟ್ ಮಾಡಲು ಅವಧಿ ವಿಸ್ತರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಾಮಾನ್ಯವಾಗಿ ನೀವು ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಲು ದಂಡವನ್ನು ಪಾವತಿಸಬೇಕಾಗುತ್ತದೆ. ಆದರೆ ಉಚಿತವಾಗಿ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನಿಮಗೆ ಅವಕಾಶ ನೀಡಿದೆ. ಇದಕ್ಕಾಗಿ ಯುಐಡಿಎಐ ಜೂನ್ 14ರ ವರೆಗೆ ಉಚಿತ ಅಪ್‌ಡೇಟ್‌ಗೆ ಅವಕಾಶ ನೀಡಿತ್ತು. ಆದರೆ ಇದೀಗ ಅವಧಿಯನ್ನು ಸೆಪ್ಟೆಂಬರ್‌ 14ರ ವರೆಗೆ ಮತ್ತೆ ವಿಸ್ತರಣೆ ಮಾಡಲಾಗಿದೆ.

ಈ ಅವಧಿಯೊಳಗೆ ಆಧಾರ್‌ ಕಾರ್ಡ್‌ನಲ್ಲಿ ನಿಮ್ಮ ವಿಳಾಸ, ಹೆಸರು ಮತ್ತು ಇತರ ಮಾಹಿತಿಗಳನ್ನು ಅಪ್‌ ಡೇಟ್‌ ಮಾಡುವುದು ಕಡ್ಡಾಯವಾಗಿದೆ.

ಹತ್ತು ವರ್ಷ ಹಳೆಯ ಆಧಾರ್‌ ಕಾರ್ಡ್‌ ಅನ್ನು ಪರಿಷ್ಕರಣೆ ಮಾಡಲು ಸರ್ಕಾರ ಜನತೆಗೆ ಮನವಿ ಮಾಡಿದೆ. ಸಾಮಾನ್ಯವಾಗಿ ಆಧಾರ್‌ ಅಪ್‌ ಡೇಟ್‌ ಮಾಡಲು 50 ರೂ ಶುಲ್ಕ ತಗಲುತ್ತದೆ. ಆದರೆ ಆಧಾರ್‌ನ ಅಧಿಕೃತ ವೆಬ್‌ಸೈಟ್‌ https://myaadhaar.uidai.gov.in ಮೂಲಕ ಉಚಿತವಾಗಿ ಅಪ್‌ ಡೇಟ್‌ ಮಾಡಬಹುದು.

ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಮಾಡುವುದು ಹೇಗೆ ?

ಸ್ಟೆಪ್‌ 1: ಮೊದಲಿಗೆ UIDAI ಜಾಲತಾಣದಲ್ಲಿ (https://myaadhaar.uidai.gov.in) Aadhaar Self Service (ಆಧಾರ್ ಸೆಲ್ಪ್ ಸರ್ವಿಸ್) ಪೋರ್ಟಲ್‌ಗೆ ಭೇಟಿ ನೀಡಿ.
ಸ್ಟೆಪ್‌ 2: ಡಾಕ್ಯುಮೆಂಟ್ ಅಪ್‌ಡೇಟ್ (Document Update) ಮೇಲೆ ಕ್ಲಿಕ್ ಮಾಡಿ ಮತ್ತು ಈಗಿರುವ ದಾಖಲೆ, ಮಾಹಿತಿಯನ್ನು ಖಚಿತಪಡಿಸಿ.
ಸ್ಟೆಪ್‌ 3: ಡ್ರಾಪ್-ಡೌನ್ ಪಟ್ಟಿಯನ್ನು ಬಳಸಿ, ಪರಿಶೀಲನೆಗಾಗಿ ಮೂಲ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಆಯ್ಕೆಮಾಡಿ ಮತ್ತು ಅಪ್‌ಲೋಡ್ ಮಾಡಿ.
ಸ್ಟೆಪ್‌ 4: ಈ ವೇಳೆ ನೀಡಲಾಗುವ ಸರ್ವೀಸ್ ರಿಕ್ವೆಸ್ಟ್ ನಂಬರ್ ನೋಟ್ ಮಾಡಿಟ್ಟುಕೊಳ್ಳಿ. ಇದರಿಂದ ಅಪ್‌ಡೇಟ್ ಪ್ರೊಸೆಸಿಂಗ್ ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.

ಇದೀಗ ನಿಮ್ಮ ಆನ್‌ಲೈನ್ ಆಧಾರ್ ಅಪ್‌ಡೇಟ್ ಪ್ರಕ್ರಿಯೆ ಮುಕ್ತಾಯವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!