ಜಮ್ಮು- ಕಾಶ್ಮೀರದಲ್ಲಿ ಗೆಲುವಿನ ಖಾತೆ ತೆರೆದ ಆಮ್ ಆದ್ಮಿ ಪಕ್ಷ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಮೊದಲ ಖಾತೆಯನ್ನು ತೆರೆದಿದೆ. ದೋಡಾದಲ್ಲಿ ಎಎಪಿಯ ಮೆಹರಾಜ್ ಮಲಿಕ್ ಗೆಲುವು ಸಾಧಿಸಿದ್ದಾರೆ.

ಮಲಿಕ್ 22944 ಮತಗಳನ್ನು ಪಡೆದು 18174 ಮತಗಳನ್ನು ಪಡೆದ ರಾಣಾ ಅವರನ್ನು 4770 ಮತಗಳ ಭಾರೀ ಅಂತರದಿಂದ ಸೋಲಿಸಿದರು.ನ್ಯಾಷನಲ್ ಕಾನ್ಫರೆನ್ಸ್‌ನ ಖಾಲಿದ್ ನಜೀಬ್ ಸುಹರ್ವರ್ಡಿ 12975 ಮತಗಳನ್ನು ಪಡೆದು ದೋಡಾದ ಮೂರನೇ ಸ್ಥಾನದಲ್ಲಿದ್ದಾರೆ.

ಮಾರ್ಚ್ 2022 ರಲ್ಲಿ ದೋಡಾ ನಗರದಲ್ಲಿ ಮಲಿಕ್ ಮೊದಲ ಬಾರಿಗೆ ಬೃಹತ್ ರ್ಯಾಲಿಯನ್ನು ಆಯೋಜಿಸಿದಾಗ ಆಮ್​ ಆದ್ಮಿ ಪಕ್ಷ ಜಮ್ಮು ಪ್ರಾಂತ್ಯದ ಚೆನಾಬ್ ಕಣಿವೆ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ತೋರಿಸಿತ್ತು.

ದೋಡಾ ಜಿಲ್ಲಾ ಅಭಿವೃದ್ಧಿ ಮಂಡಳಿಯ ಸದಸ್ಯ ಮಲಿಕ್, ಸ್ಥಳೀಯ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿ ಆಗಾಗ ಸುದ್ದಿಯಲ್ಲಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!