Monday, October 13, 2025

ದೇಶವ್ಯಾಪಿ ನಡೆಯಲಿದೆ ’ಆಪ್ ಕಿ ಪುಂಜಿ ಆಪ್ ಕಾ ಅಧಿಕಾರ್’: ಗುಜರಾತ್ ನಲ್ಲಿ ಅಭಿಯಾನಕ್ಕೆ ಸಚಿವೆ ನಿರ್ಮಲಾ ಹಸಿರು ನಿಶಾನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುಜರಾತ್ ನ ಗಾಂಧಿನಗರದಲ್ಲಿ ‘ಆಪ್ ಕಿ ಪೂಂಜಿ ಆಪ್ ಕಾ ಅಧಿಕಾರ್’ ದೇಶವ್ಯಾಪಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಈ ಅಭಿಯಾನ ಹಕ್ಕು ಪಡೆಯದ ಠೇವಣಿಗಳನ್ನು ಅವರ ಕಾನೂನುಬದ್ಧ ಹಕ್ಕುದಾರರಿಗೆ ಸರಿಯಾಗಿ ಹಿಂದಿರುಗಿಸುವುದನ್ನು ಖಾತರಿಪಡಿಸುತ್ತದೆ ಎಂದು ಹೇಳಿದರು.

ಫಲಾನುಭವಿಗಳಿಗೆ ಅಭಿಯಾನದ ಪ್ರಯೋಜನವನ್ನು ಖಾತರಿಪಡಿಸಲು ಈ ಉಪಕ್ರಮದ ಬಗ್ಗೆ ಜನಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು. ಹಣಕಾಸು ಸಂಸ್ಥೆಗಳು ಹಾಗೂ ಹಕ್ಕು ಪಡೆಯುವವರ ನಡುವಿನ ಅಂತರವನ್ನು ತಗ್ಗಿಸುವ ಮಹತ್ವವನ್ನು ವಿವರಿಸಿದ ಅವರು, ಜನರ ಆರ್ಥಿಕ ಸಬಲೀಕರಣಕ್ಕೆ ಈ ಹೆಜ್ಜೆ ನಿರ್ಣಾಯಕವಾಗಿದೆ ಎಂದು ಹೇಳಿದರು.

ಗುಜರಾತ್ ಹಣಕಾಸು ಸಚಿವ ಕನುಭಾಯ್ ದೇಸಾಯಿ ಕೂಡ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದಿನ 3 ತಿಂಗಳುಗಳಲ್ಲಿ ಈ ಅಭಿಯಾನ ದೇಶದ ಪ್ರತಿಯೊಂದು ಜಿಲ್ಲೆಯನ್ನು ಒಳಗೊಳ್ಳಲಿದ್ದು, ಬ್ಯಾಂಕುಗಳು, ವಿಮಾ ಕಂಪನಿಗಳು, ಪಿಂಚಣಿ ನಿಧಿಗಳು ಮತ್ತು ಷೇರು ಹಾಗೂ ಮ್ಯೂಚುಯಲ್ ಫಂಡ್ ಕಂಪನಿಗಳು ಹೊಂದಿರುವ ಕ್ಲೇಮ್ ಮಾಡದ ಆಸ್ತಿಗಳ ಸುಲಭ ಮತ್ತು ತ್ವರಿತ ಪರಿಹಾರವನ್ನು ಈ ಅಭಿಯಾನ ಕೇಂದ್ರೀಕರಿಸಲಿದೆ. 1 ಲಕ್ಷ 82 ಸಾವಿರ ಕೋಟಿ ಮೌಲ್ಯದ ಕ್ಲೇಮ್ ಮಾಡದ ಆಸ್ತಿಗಳು ಪ್ರಸ್ತುತ ದೇಶಾದ್ಯಂತ ವಿವಿಧ ಹಣಕಾಸು ಸಂಸ್ಥೆಗಳಲ್ಲಿವೆ. ಸಮಾರಂಭದಲ್ಲಿ ಹಲವಾರು ಹಕ್ಕು ಪಡೆಯದ ಆಸ್ತಿಗಳ ಮರುಪಡೆಯುವಿಕೆಯನ್ನು ದೃಢೀಕರಿಸುವ ಪ್ರಮಾಣಪತ್ರಗಳನ್ನು ನೀಡಲಾಯಿತು.

error: Content is protected !!