September 21, 2026
Monday, September 21, 2026
spot_img

ಅಸ್ಸಾಂನಲ್ಲಿ ಕಾಂಗ್ರೆಸ್ ಗೆ ಮರ್ಮಾಘಾತ: ಬಿಜೆಪಿ ಅಂಗಳಕ್ಕೆ ಹಾಲಿ ಸಂಸದ ಬೊರ್ಡೊಲೊಯಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ಕಾವೇರುತ್ತಿರುವ ನಡುವೆಯೇ ಸಂಸದ ಪ್ರದ್ಯುತ್ ಬೊರ್ಡೊಲೊಯಿ ಬುಧವಾರ ಬಿಜೆಪಿಯತ್ತ ಮುಖಮಾಡಿದ್ದು, ಕಾಂಗ್ರೆಸ್ ಗೆ ಈ ಬೆಳವಣಿಗೆ ಮರ್ಮಾಘಾತ ನೀಡಿದೆ!

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಸೈಕಿಯಾ ಅವರ ಸಮ್ಮುಖದಲ್ಲಿ ಬೊರ್ಡೊಲೊಯಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಈ ವೇಳೆ ಮಾತನಾಡಿದ ಅಸ್ಸಾಂ ಸಿಎಂ ಶರ್ಮಾ , ಪಕ್ಷಕ್ಕೆ ಹಿರಿಯ ಸಂಸದ ಬೊರ್ಡೊಲೊಯಿ ಆಗಮನ ಶಕ್ತಿ ಬಂದಂತೆ ಆಗಿದೆ. ಆದರೆ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಸಿಕ್ಕಿದೆ . ಅಸ್ಸಾಂ ನಲ್ಲಿ ಮೂವರು ಸಂಸದರಲ್ಲಿ ಒಬ್ಬರನ್ನು ಕಳೆದುಕೊಂಡಿದೆ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರ ಬರೆದಿದ್ದ ಬೊರ್ಡೊಲೊಯಿ, ಬೇಸರದಿಂದ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಹಾಗೂ ಎಲ್ಲಾ ಕರ್ತವ್ಯಗಳಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅದರಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯದ ಬೆಳವಣಿಗೆ ಕುರಿತು ಮಾತನಾಡಿದ ಅಸ್ಸಾಂ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ , ಟಿಕೆಟ್ ಹಂಚಿಕೆಯಲ್ಲಿ ಅಸಮಧಾನದಿಂದ ಬೊರ್ಡೊಲೊಯಿ ರಾಜೀನಾಮೆ ನೀಡಿದ್ದಾರೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !