ಗಂಗಾ ಆರತಿ ರೀತಿ ಕಾವೇರಿಗೂ ಆರತಿ: ಡಿಕೆಶಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಡೀ ವಿಶ್ವವೇ ಎದುರು ನೋಡುವ ಗಂಗಾ ಆರತಿ ರೀತಿಯಲ್ಲಿ ಕಾವೇರಿ ಆರತಿ ಮಾಡಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

Ganga Aarati Rishikesh | rISHIKESH Ganga River

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್​ಎಸ್ ಜಲಾಶಯಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, 25 ಜನರ ತಂಡ ಕಳುಹಿಸಿ ನಂತರ ವರದಿ ಕೊಡುತ್ತಾರೆ. ಆನಂತರ ಕಾವೇರಿ ಆರತಿ ಕಾರ್ಯಕ್ರಮ ಮಾಡುತ್ತೇವೆ . ಧಾರ್ಮಿಕ ದತ್ತಿ ಇಲಾಖೆ, ಕಾವೇರಿ ನೀರಾವರಿ ನಿಗಮ ಸೇರಿಕೊಂಡು ಕಾರ್ಯಕ್ರಮ ಮಾಡುತ್ತಾರೆ ಎಂದರು.

Ganga aarti in Varanasi and Haridwar turns into a quiet affair due to  COVID-19 spread | Times of India Travel

ವರುಣನ ಕೃಪೆ, ಚಾಮುಂಡೇಶ್ವರಿ ಅನುಗ್ರಹದಿಂದ ಕಾವೇರಿಗೆ ಬಾಗಿನ ಅರ್ಪಿಸುವ ಕಾಲ ದೊರೆತಿದೆ. ಕಳೆದ ವರ್ಷ ಕಷ್ಟದಲ್ಲಿ ಇದ್ದೆವು. ಆದರೂ ರೈತರನ್ನು ಕಾಪಾಡಿದ್ದೇವೆ. ಕಳೆದ ವರ್ಷ 200 ತಾಲೂಕುಗಳಲ್ಲಿ ಬರಗಾಲವಿತ್ತು. ಕಾವೇರಿ ಪ್ರಾಧಿಕಾರ ಆದೇಶದ ಪ್ರಕಾರ 40 ಟಿಎಂಸಿ ಬಿಡಬೇಕಿತ್ತು. ಆದರೆ 20 ಟಿಎಂಸಿ ಬಿಡಲು ಹೇಳಿತ್ತು. ಅಷ್ಟನ್ನೂ ನಾವು ಬಿಡಲಿಲ್ಲ. ಕೆಲವರು ನೀರು ಬಿಟ್ಟಿದ್ದೇವೆ ಎಂದು ವಾದ ಮಾಡಿದ್ದಾರೆ. ನಾವು ಎಲ್ಲರನ್ನು ಕರೆದು ಚರ್ಚೆ ಮಾಡಿದ್ದೇವೆ. ಆನಂತರ ನೀರು ಬಿಟ್ಟಿದ್ದೇವೆ. 30 ಟಿಎಂಸಿ ನೀರು ತಮಿಳುನಾಡಿಗೆ ತಲುಪಿಸಿದ್ದೇವೆ. ಇನ್ನು ಹತ್ತು ಟಿಎಂಸಿ ನೀರು ಬಿಡಬೇಕು. ಈ ವರ್ಷದ ಕೋಟಾ ಮುಗಿಯುತ್ತದೆ. 50 ಸಾವಿರ ಕ್ಯೂಸೆಕ್ ನೀರು ಹೋಗುತ್ತಿದೆ. ಆದೇಶವನ್ನು ಪಾಲನೆ ಮಾಡಿದ್ದೇವೆ ಎಂದು ಅವರು ಹೇಳಿದರು.

Ganga Aarti Destinations In India

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!