ಅಬ್ಬಬ್ಬಾ ಈ ಅಜ್ಜಿ ಎನರ್ಜಿಗೆ ಒಂದು ನಮಸ್ಕಾರ!! ವಯಸ್ಸು ದೇಹಕ್ಕಷ್ಟೇ ಮನಸಿಗಲ್ಲ ಅನ್ನೋ ಮಾತು ಸತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಯಸ್ಸು ಕೇವಲ ಒಂದು ಸಂಖ್ಯೆ. ಆದರೆ ಮನಸ್ಸಿನ ಮೇಲೆ ಯಾವ ಪರಿಣಾಮ ಬಿರೋದಿಲ್ಲ ಅನ್ನೋದು ಅಷ್ಟೇ ಸತ್ಯ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಅಜ್ಜಿಯೊಬ್ಬರು ಹುಡುಗಿಯರನ್ನು ನಾಚಿಸುವಂತೆ ಡ್ಯಾನ್ಸ್ ಮಾಡುತ್ತಿರುವುದು ಕಂಡು ಬಂದಿದೆ.

95ರ ಹರೆಯದ ಅಜ್ಜಿ ತಮಿಳಿನ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವೃದ್ಧೆಯ ಡ್ಯಾನ್ಸ್‌ಗೆ ನೆಟಿಜನ್‌ಗಳು ಖುಷಿಯಾಗಿದ್ದಾರೆ. ಭಾರತೀಯ ರೈಲ್ವೇ ಖಾತೆ ಅಧಿಕಾರಿ ಅನಂತ್ ರೂಪಂಗುಡಿ ಅವರು ಟ್ವಿಟರ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಮತ್ತು “95 ವರ್ಷದ ಅಜ್ಜಿ ವೃದ್ಧಾಶ್ರಮದಲ್ಲಿ ಹಳೆಯ ತಮಿಳು ಹಾಡಿಗೆ ನೃತ್ಯ ಮಾಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಮೇಲಾಗಿ, ಈ ಹಿರಿಯ ಮಹಿಳೆ 1940 ರ ದಶಕದಲ್ಲಿ ಕಲಾಕ್ಷೇತ್ರ ಫೌಂಡೇಶನ್‌ನ ವಿದ್ಯಾರ್ಥಿಯಾಗಿದ್ದರು ಮತ್ತು ನೃತ್ಯಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ವೃದ್ಧೆಯು ‘ಚಂದ್ರಲೇಖಾ’ ನಂತಹ ಹಿಟ್ ಚಿತ್ರಗಳ ಹಿನ್ನೆಲೆ ನೃತ್ಯಗಾರ್ತಿಯಾಗಿ ಕೆಲಸ ಮಾಡಿದ್ದರು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಈ ವೀಡಿಯೊವನ್ನು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!