ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯ ಸಂಸದೆ ಸುಮಲತಾ (Ambareesh-Sumalatha) ಪುತ್ರ, ನಟ ಅಭಿಷೇಕ್ ಅಂಬರೀಶ್ (Abhishek Ambareesh) ಅವರ ಮದುವೆ ಸಿದ್ಧತೆಯಲಿದ್ದು,ಈ ಹಿನ್ನೆಲೆ ಇಂದು (ಏಪ್ರಿಲ್ 05) ಅಭಿಷೇಕ್ ಅಂಬರೀಶ್ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಮದುವೆ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ಸಹ ಈ ಸಂದರ್ಭ ಜೊತೆಯಾಗಿದ್ದಾರೆ.
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ನಿಶ್ಚತಾರ್ಥವು ಕೆಲವು ತಿಂಗಳ ಹಿಂದೆ ನಡೆದಿತ್ತು. ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿಯೇ ಈ ಜೋಡಿಯ ಅದ್ಧೂರಿ ವಿವಾಹ ನಡೆಯಲಿದ್ದು, ಆಮಂತ್ರಣ ಪತ್ರಿಕೆ ಹಂಚಿಕೆ ಪ್ರಾರಂಭವಾಗಿದೆ. ಇತ್ತೀಚೆಗಷ್ಟೆ ತಮ್ಮ ಬೆಂಬಲವನ್ನು ಬಿಜೆಪಿಗೆ ನೀಡಿರುವ ನಟಿ, ಸಂಸದೆ ಸುಮಲತಾ, ಮಗನೊಟ್ಟಿಗೆ ತೆರಳಿ ಪ್ರಧಾನಿ ಮೋದಿಯವರಿಗೆ ಆಮಂತ್ರಣ ಪತ್ರಿಕೆ ನೀಡಿ ವಿವಾಹಕ್ಕೆ ಆಹ್ವಾನಿಸಿದ್ದಾರೆ.
ಪ್ರಧಾನಿ ಮೋದಿ ಮಾತ್ರವೇ ಅಲ್ಲದೆ, ಸುಮಲತಾ ಅವರ ಹಲವು ರಾಜಕೀಯ ಸಹವರ್ತಿಗಳಿಗೆ ಆಮಂತ್ರಣ ಪತ್ರಿಕೆಯನ್ನು ಅಭಿಷೇಕ್ ಹಾಗೂ ಸುಮಲತಾ ಒಟ್ಟಿಗೆ ನೀಡಲಿದ್ದಾರೆ. ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಸೇರಿದಂತೆ ಹಲವು ಪ್ರಮುಖ ಸಂಸದರು ಹಾಗೂ ಸಚಿವರುಗಳಿಗೆ ಸುಮಲತಾ ಹಾಗೂ ಅಭಿಷೇಕ್ ಅವರು ಆಹ್ವಾನ ಪತ್ರಿಕೆಯನ್ನು ನೀಡಲಿದ್ದಾರೆ.