ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಭರ್ಜರಿಯಾಗಿ ಮದುವೆಯಾದ ಅಭಿಷೇಕ್ ಅಂಬರೀಷ್ ಹಾಗೂ ಅವಿವ ಬಿಡಪ ಫ್ಯಾಮಿಲಿಯಿಂದ ಇಂದು ಮಂಡ್ಯದಲ್ಲಿ ಬೊಂಬಾಟ್ ಬಾಡೂಟ ತಯಾರಾಗಿದೆ.
ಮಂಡ್ಯ ಗೌಡ್ರ ಬಾಡೂಟ ಅಂದ್ರೆ ಇಡೀ ರಾಜ್ಯಕ್ಕೇ ಫೇಮಸ್, ಇನ್ನು ಅಂಬಿ ಕುಟುಂಬದಿಂದ ಬಾಡೂಟ ಅಂದ್ರೆ ಸುಮ್ನೇನಾ? ಇಡೀ ಮಂಡ್ಯ ತುಂಬಾ ನಾನ್ ವೆಜ್ ಘಮಲು ಹರಡಿದ್ದು, ಈ ಕಾರ್ಯಕ್ರಮಕ್ಕೂ ನಾನಾ ಸೆಲೆಬ್ರಿಟಿಗಳು ಹಾಜರಾಗ್ತಿದ್ದಾರೆ.
ಈಗಾಗಲೇ ಸಕಲ ಸಿದ್ಧತೆ ನಡೆದಿದ್ದು, ಇಡೀ ಊರಿನವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. 15 ಎಕರೆ ಪ್ರದೇಶದಲ್ಲಿ ಊಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, 50 ಸಾವಿರಕ್ಕೂ ಹೆಚ್ಚು ಜನ ಬರುವ ನಿರೀಕ್ಷೆ ಇದೆ.