ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಾನುಗಟ್ಟಲೆ ಪ್ರೀತಿಯಲ್ಲಿ ಮುಳುಗಿದ್ದ ಅಭಿಷೇಕ್ ಅಂಬರೀಶ್ ಹಾಗೂ ಅವಿವ ಬಿಡಪ ಇಂದು ಹಸೆಮಣೆ ಏರಿದ್ದಾರೆ. ಮಾಣಿಕ್ಯ ಚಾಮರ ವಜ್ರದಲ್ಲಿ ಅದ್ಧೂರಿ ವಿವಾಹ ನೆರವೇರಿದ್ದು, ಅವಿವ ಮಂಡ್ಯ ಸೊಸೆಯಾಗಿದ್ದಾರೆ. ಅದ್ಧೂರಿ ವಿವಾಹಕ್ಕೆ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಆಗಮಿಸಿದ್ದಾರೆ.
ಸ್ಯಾಂಡಲ್‌ವುಡ್ ಅಷ್ಟೇ ಅಲ್ಲದೆ ಟಾಲಿವುಡ್ ಸೆಲೆಬ್ರಿಟಿಸ್ ಕೂಡ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಜೂ.7 ರಂದು ಪ್ಯಾಲೇಸ್ ಗ್ರೌಂಡ್‌ನಲ್ಲಿರುವ ತ್ರಿಪುರ ವಾಸಿನಿಯಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದ್ದು, ಹೆಚ್ಚಿನ ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ. ಇಂದು ಆಪ್ತರು ಹಾಗೂ ಕುಟುಂಬದವರು ನವಜೋಡಿಗೆ ಹರಸಿದ್ದಾರೆ.