ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ಮಂಡ್ಯದ ತುಂಬೆಲ್ಲಾ ಬಾಡೂಟದ್ದೇ ಘಮಲು, 15 ಎಕರೆ ಜಾಗದಲ್ಲಿ ಅಂಬಿ ಪರಿವಾರ ಬೀಗರೂಟಕ್ಕೆ ವ್ಯವಸ್ಥೆ ಮಾಡಿತ್ತು.
ಅಭಿಷೇಕ್-ಅವಿವಾ ಮದುವೆಯ ನಂತರ ಬೀಗರೂಟಕ್ಕೆ 50ಸಾವಿರ ಜನರಿಗೆ ಆಹ್ವಾನ ನೀಡಲಾಗಿತ್ತು. ಜೊತೆಗೆ ಊರಿನವರಿಗೂ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಂದುಕೊಂಡಷ್ಟು ಜನ ಊಟಕ್ಕೆ ಬರಲೇ ಇಲ್ಲ.
ಇದರ ಜೊತೆಗೆ ಅಡುಗೆ ಮಾಡುವ ಸ್ಥಳಕ್ಕೆ ಕೆಲವರು ಬಂದು ದಾಂಧಲೆ ಮಾಡಿದ್ದು, ಊಟವನ್ನು ಚೆಲ್ಲಿದ್ದಾರೆ. ಈ ಬಗ್ಗೆ ಅಭಿಷೇಕ್ ಮಾತನಾಡಿದ್ದು, ದುಡ್ಡು ವೇಸ್ಟ್ ಆಯ್ತು ಅನ್ನೋಕ್ಕಿಂತ ಅನ್ನ ಯಾರ ಹೊಟ್ಟೆಗೂ ಸೇರದೇ ವೇಸ್ಟ್ ಆಗಿದ್ದಕ್ಕೆ ಮನಸ್ಸಿಗೆ ನೋವಾಗಿದೆ. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಕೆಲವರ ದಾಂಧಲೆಯಿಂದ ಸಾಕಷ್ಟು ಊಟ ವೇಸ್ಟ್ ಆಗಿ ಹೋಯ್ತು ಎಂದು ಹೇಳಿದ್ದಾರೆ.