March 9, 2026
Monday, March 9, 2026
spot_img

ಫೈನಲ್ ಪಂದ್ಯದಲ್ಲಿ ಕೊನೆಗೂ ಅಭಿಷೇಕ್ ಶರ್ಮಾ ಕಮ್ ಬ್ಯಾಕ್: ಕಿವೀಸ್ ವಿರುದ್ಧ ಭರ್ಜರಿ ಬ್ಯಾಟಿಂಗ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೊನೆಗೂ ಫೈನಲ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕಮ್ ಬ್ಯಾಕ್: ಕಿವೀಸ್ ವಿರುದ್ಧ ಭರ್ಜರಿ ಬ್ಯಾಟಿಂಗ್!
ಭಾರತ- ನ್ಯೂಜಿಲ್ಯಾಂಡ್ ನಡುವಿನ ಟಿ20 ವಿಶ್ವಕಪ್ ಹೈವೋಲ್ಟೇಜ್ ಫೈನಲ್ ನಲ್ಲಿ ಕೊನೆಗೂ ಅಭಿಷೇಕ್ ಶರ್ಮಾ ಅಬ್ಬರಿಸಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಆರಂಭವನ್ನು ಪಡೆದಿದೆ. ಕಳಪೆ ಬ್ಯಾಟಿಂಗ್ ನಿಂದ ನಿರಾಶೆ ಮೂಡಿಸಿದ್ದ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ಲಯ ಕಂಡುಕೊಂಡಿದ್ದು, 18 ಎಸೆತಗಳಲ್ಲಿ 51 ರನ್ ಗಳಿಸಿ ಕಮ್ ಬ್ಯಾಕ್ ಮಾಡಿದ್ದಾರೆ.

ಅಭಿಷೇಕ್ ಶರ್ಮಾ ಕೇವಲ 18 ಎಸೆತಗಳಲ್ಲಿ ಟಿ20 ವಿಶ್ವಕಪ್ 2026 ರ ಟೂರ್ನಿಯ ಅತ್ಯಂತ ವೇಗದ ಅರ್ಧಶತಕ ಬಾರಿಸಿದರು. ಕೇವಲ 21 ಎಸೆತಗಳಲ್ಲಿ 52 ರನ್ ಗಳಿಸಿ ಔಟಾದರು. ಇದರಲ್ಲಿ 6 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳು ಸೇರಿವೆ. ಟೂರ್ನಿಯುದ್ದಕ್ಕೂ ಫಾರ್ಮ್‌ಗಾಗಿ ಹೋರಾಡುತ್ತಿದ್ದ ಅಭಿಷೇಕ್, ಫೈನಲ್‌ನಲ್ಲಿ ಪ್ರತಿಯೊಬ್ಬ ಟೀಕೆಕಾರರ ಬಾಯಿ ಮುಚ್ಚಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !