ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿಷೇಕ್ ಶರ್ಮಾ ಅಬ್ಬರದ ಆಟಕ್ಕೆ ಪಂಜಾಬ್ ತತ್ತರಿಸಿ ಹೋಗಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಹೈದರಾಬಾದ್ ತವರಲ್ಲಿ ಪಂಜಾಬ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಹೈದರಾಬಾದ್ ಪಿಚ್‌ನಲ್ಲಿ ಪಂಜಾಬ್ ಕಿಂಗ್ಸ್ ಕೂಡ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿತು. ಶ್ರೇಯಸ್ ಅಯ್ಯರ್ ಪಡೆ 20 ಓವರ್‌ಗೆ 6 ವಿಕೆಟ್ ನಷ್ಟಕ್ಕೆ 245 ರನ್ ಟಾರ್ಗೆಟ್ ನೀಡಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್‌ನಲ್ಲಿ ರನ್ ಗಳ ಹೊಳೆ ಹರಿಸಿತು. 18.3 ಓವರ್‌ಗೆ ಕೇವಲ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಹೈದರಾಬಾದ್ ಗೆದ್ದು ಬೀಗಿತು. ಆ ಮೂಲಕ ಐಪಿಎಲ್ ಇತಿಹಾಸದಲ್ಲೇ ಬೃಹತ್ ಮೊತ್ತವನ್ನು ಚೇಸ್ ಮಾಡಿ ಗೆದ್ದ 2ನೇ ತಂಡವಾಗಿ ದಾಖಲೆ ಬರೆದಿದೆ.
ಪಂಜಾಬ್ ನೀಡಿದ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಹೈದರಾಬಾದ್ ಆರಂಭದಲ್ಲೇ ಉತ್ತಮ ಪ್ರದರ್ಶನ ನೀಡಿತು. ಹೆಡ್ ಮತ್ತು ಅಭಿಷೇಕ್ ಜೋಡಿ 75 ಬಾಲ್‌ಗೆ 171 ರನ್‌ಗಳ ಅಮೋಘ ಜೊತೆಯಾಟ ನೀಡಿತು. ತಂಡದ ಮೊತ್ತ 171 ರನ್ ಇದ್ದಾಗ ಟ್ರಾವಿಸ್ ಹೆಡ್ ಅರ್ಧಶತಕ ಗಳಿಸಿ ಔಟಾದರು.
ನಂತರ ಸಿಕ್ಸರ್, ಫೋರ್ ಮೂಲಕ ರನ್ ಹೊಳೆ ಹರಿಸಿದ ಅಭಿಷೇಕ್ ಶರ್ಮಾ 55 ಬಾಲ್‌ಗೆ 141 ರನ್ ಗಳಿಸಿದರು. ಅಂತಿಮವಾಗಿ 18.3 ಬಾಲ್‌ಗೆ ಕೇವಲ 2 ವಿಕೆಟ್ ನಷ್ಟಕ್ಕೆ ಎಸ್‌ಆರ್‌ಹೆಚ್ 247 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು.