ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೃದಯಾಘಾತದಿಂದ ದಿಢೀರ್ ಕುಸಿದು ಬಿದ್ದು ಅಬಕಾರಿ ಎಸ್ಐ ಸಾವನ್ನಪ್ಪಿರುವಂತ ಘಟನೆಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.
ಅಕೋಲಾದ ಅಬಕಾರಿ ಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಪುರುಷೋತ್ತಮ ಹಳದನ್ ಕರ್(59) ಎಂಬುವರೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಅಧಿಕಾರಿಯಾಗಿದ್ದಾರೆ.
ಇಂದು ತಮ್ಮ ಮನೆಯಲ್ಲಿ ಬಾತ್ ರೂಮ್ ಗೆ ತೆರಳಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಎಷ್ಟು ಹೊತ್ತಾದರೂ ಬಾತ್ ರೂಮ್ ನಿಂದ ಬಾರದ ಕಾರಣ ಮನೆಯವರು ಹೋಗಿ ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಪುರುಷೋತ್ತಮ್ ಕಂಡು ಬಂದಿದ್ದಾರೆ. ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪುರುಷೋತ್ತಮ್ ಅವರನ್ನು ಪರೀಕ್ಷಿಸಿದಂತ ವೈದ್ಯರು ಆಸ್ಪತ್ರೆಗೆ ತರುವ ಮೊದಲೇ ನಿಧನರಾಗಿದ್ದಾರೆ ಎಂಬುದಾಗಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.