ಹೊಸದಿಗಂತ ವರದಿ, ಕಲಬುರಗಿ:
ಬೀದರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ತಿಪ್ಪಣ್ಣಾ ಸಿರಸಗಿ ಗೆ ಎಸಿಬಿ ಶಾಕ್ ನೀಡಿದೆ. ಅಧಿಕಾರಿ ಮನೆಗೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳನ್ನು ಜಾಲಾಡುತ್ತಿದ್ದಾರೆ.
ತಿಪ್ಪಣ್ಣಾ ಅವರ ಕಲಬುರಗಿ ನಗರದ ಕೆ.ಎಚ್.ಬಿ.ಕಾಲೋನಿಯ ಮನೆ ಮೇಲೆ 22 ಎಸಿಬಿ ಅಧಿಕಾರಿ ತಂಡದಿಂದ ದಾಳಿ ನಡೆದಿದ್ದು, ಅಕ್ರಮ ಆಸ್ತಿ ಖರೀದಿ ಬಗ್ಗೆ ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಕೋಟಿ ಕೋಟಿ ಆಸ್ತಿ ಒಡೆಯ ತಿಪ್ಪಣ್ಣಾ ಸಿರಸಗಿ, ಇತ್ತೀಚೆಗೆ ನಗರದ ಶರಣ ಸಿರಸಗಿ ಗ್ರಾಮದಲ್ಲಿ ಐದು ಎಕರೆ ಜಮೀನು ಖರೀದಿ ಮಾಡಿದ್ದಾನೆ.
ತಾಯಿ ಹೆಸರಿನಲ್ಲಿ ಐದು ಎಕರೆ ಜಮೀನು ಖರೀದಿ, ತೋಟದ ಮನೆ ನಿರ್ಮಾಣ, ಕೆ.ಎಚ್.ಬಿ.ಕಾಲೋನಿಯಲ್ಲಿ ಲಕ್ಷ ಲಕ್ಷ ಮೌಲ್ಯ, ದ ಮತ್ತೋಂದು ಸೈಟ್ ಖರೀದಿ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದ್ದು, ಎಸಿಬಿ ಅಧಿಕಾರಿಗಳು ಮನೆಯ ರಹಸ್ಯ ದಾಖಲೆಗಳನ್ನು ಜಾಲಾಡುತ್ತಿದ್ದಾರೆ.
ಬಿಗಿ ತಪಾಸಣೆ:
ಇನ್ನೋಂದೆಡೆ ಎಸಿಬಿ ಅಧಿಕಾರಿಗಳು ಅಧಿಕಾರಿ ತಿಪ್ಪಣ್ಣಾ ಸಿರಸಗಿ ಅವರ ಮನೆಯ ಬೆಡ್ ರೂಂನ್ನು ತಪಾಸಣೆ ಮಾಡುತ್ತಿದ್ದಾರೆ. ಬೆಡ್ ರೂಂ ನಲ್ಲೂ ಮಹತ್ವದ ದಾಖಲೆ, ಚಿನ್ನಾಭರಣ ಮುಚ್ಚಿಟ್ಟಿರುವ ಬಗ್ಗೆ ಸುಳಿವುಗಳು ಲಭ್ಯವಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.