ಹೊಸದಿಗಂತ ಹಾಸನ:
ಬೈಕ್ನಿಂದ ಆಯತಪ್ಪಿ ಬಿದ್ದು ಹೆಡ್ಕಾನ್ಸ್ಟೇಬಲ್ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ, ಜೋಡಿಗುಬ್ಬಿ ಕ್ರಾಸ್ ಬಳಿ ನಡೆದಿದೆ.
ವೆಂಟೇಶ್ (55) ಸಾವನ್ನಪ್ಪಿದ ಹೆಡ್ಕಾನ್ಸ್ಟೇಬಲ್. ಮೃತ ವೆಂಕಟೇಶ್ ಅರಕಲಗೂಡು ತಾಲೂಕಿನ ಕೊಣನೂರು ಪೊಲೀಸ್ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿದ್ದರು. ಸಮನ್ಸ್ ನೀಡಿ ಬೈಕ್ನಲ್ಲಿ ಪೊಲೀಸ್ ಠಾಣೆಗೆ ವಾಪಾಸ್ಸಾಗುತ್ತಿದ್ದ ವೆಂಕಟೇಶ್ ಜೋಡಿಗುಬ್ಬಿ ಕ್ರಾಸ್ನಲ್ಲಿ ಹಂಪ್ಸ್ ಕಾಣದೆ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ..
ತೀವ್ರವಾಗಿ ಗಾಯಗೊಂಡಿದ್ದ ವೆಂಕಟೇಶ್, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.