ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಕಾಯಿಟ್ ಚಿತ್ರದ ಶೂಟಿಂಗ್ ವೇಳೆ ಅನಿರೀಕ್ಷಿತ ಅಪಘಾತ ಸಂಭವಿಸಿದ್ದು, ಅಡಿವಿ ಶೇಷ್ ಮತ್ತು ಮೃಣಾಲ್ ಠಾಕೂರ್ ಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಇಬ್ಬರಿಗೂ ಗಾಯಗಳಾಗಿದ್ದರೂ, ಅವು ಗಂಭೀರವಾಗಿಲ್ಲ. ಆದರೂ ಇಬ್ಬರೂ ಶೂಟಿಂಗ್ ಮುಂದುವರೆಸಿದ್ದಾರೆ. ವೃತ್ತಿಪರತೆ ಮೆರೆದಿದ್ದಾರೆ.
ಚಿತ್ರದ ಶೂಟಿಂಗ್ ಪ್ರಸ್ತುತ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಡಿಸೆಂಬರ್ 25 ರಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಮೃಣಾಲ್ ಮತ್ತು ಅಡಿವಿ ಶೇಷ್ ಅವರ ಗಾಯಗಳು ಬೇಗ ಗುಣಮುಖವಾಗಲಿ ಎಂದು ಚಿತ್ರತಂಡ ಹಾರೈಸಿದೆ.