ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ನಲ್ಲಿ ಸಂಭವಿಸುತ್ತಿರುವ ಅಪಘಾತಗಳು ಮತ್ತು ಸಾವುಗಳನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಕರ್ನಾಟಕ ಘಟಕವು ‘ರೋಡ್ ಟು ಡೆತ್’ ಎಂಬ ಅಭಿಯಾನವನ್ನು ಕೈಗೆತ್ತಿಕೊಂಡಿದೆ.
ಕಳೆದ 9 ತಿಂಗಳಲ್ಲಿ ಅಪಘಾತಗಳಲ್ಲಿ 158 ಜನರು ಸಾವಿಗೀಡಾಗಿದ್ದಾರೆ. ಇದಕ್ಕೆ ಸರ್ಕಾರಗಳ ಅವೈಜ್ಞಾನಿಕ ಮತ್ತು ಭ್ರಷ್ಟ ಯೋಜನೆಗಳೇ ಕಾರಣ ಎಂದುಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ.
ಸರ್ಕಾರಗಳ ತಪ್ಪು ಕ್ರಮಗಳಿಂದ ಅಮಾಯಕರು ಸಾವಿಗೀಡಾಗುತ್ತಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷವು ‘ರೋಡ್ ಟು ಡೆತ್’ ಅಭಿಯಾನವನ್ನು ಕೈಗೆತ್ತಿಕೊಂಡಿದೆ ಎಂದರು.
ಈ ಅಭಿಯಾನದ ಮೂಲಕ ಅಮಾಯಕ ಪ್ರಯಾಣಿಕರ ಜೀವ ಉಳಿಸಲು ಜನಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಶುಕ್ರವಾರ (ಜೂನ್ 30) ಮೈಸೂರು ರಸ್ತೆಯ ಕಣಿಮಾನಿಕೆ ಟೋಲ್ ಪ್ಲಾಜಾ ಬಳಿ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ ಎಂದು ಮೋಹನ್ ದಾಸರಿ ತಿಳಿಸಿದರು.
ಈ ಅಭಿಯಾನಗಳ ಮೂಲಕ ಅಮಾಯಕ ಪ್ರಯಾಣಿಕರ ಜೀವ ಉಳಿಸುವುದು ಆಮ್ ಆದ್ಮಿ ಪಕ್ಷದ ಉದ್ದೇಶವಾಗಿದ್ದು, ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.