ಹೊಸದಿಗಂತ ವರದಿ ಮಡಿಕೇರಿ:
ಮಡಿಕೇರಿ- ಮಂಗಳೂರು ನಡುವಿನ ದೇವರಕೊಲ್ಲಿ ಬಳಿ ಲಾರಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಮೈಸೂರಿನಿಂದ ಕಾಫಿ ಹೊಟ್ಟು ಸಾಗಿಸುತ್ತಿದ್ದ ಲಾರಿಗೆ ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಘಟನೆಯಲ್ಲಿ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸುದ್ದಿ ತಿಳಿದ ಮಡಿಕೇರಿಯ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: FOOD | ಸಂಜೆ ತಿಂಡಿಗೆ ಮಾಡಿ ಕ್ರಿಸ್ಪಿ & ಟೇಸ್ಟಿ ನಿಪ್ಪಟ್ಟು: ರೆಸಿಪಿ ತುಂಬಾ ಸಿಂಪಲ್

