ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಕಸ್ಮಿಕವಾಗಿ ಗುಂಡು ಹಾರಿ ಯೋಧನೊಬ್ಬ ಮೃತಪಟ್ಟ ಘಟನೆ ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ನಡೆದಿದೆ. ಮೃತ ಯೋಧನನ್ನು ತಮಿಳುನಾಡಿನ ಗುಡಲೂರು ಗ್ರಾಮದ ಭಾರತೀಯ ಸೇನಾ ಯೋಧ ಈಶ್ವರನ್ ಆರ್ (27) ಎಂದು ಗುರುತಿಸಲಾಗಿದ್ದು ಮಂಗಳವಾರ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಮಂಕೋಟೆ ಸೆಕ್ಟರ್ ಬಳಿ ಘಟನೆ ನಡೆದಿದೆ.
ಯೋಧನನ್ನು ಪ್ರಸ್ತುತ 37 ರಾಷ್ಟ್ರೀಯ ರೈಫಲ್ಸ್ (RR) ನಲ್ಲಿ ನಿಯೋಜಿಸಲಾಗಿತ್ತು. ಅವರ ಸರ್ವೀಸ್ ರೈಫಲ್ ಆಕಸ್ಮಿಕವಾಗಿ ಫೈರ್ ಆಗಿ ಈಶ್ವರನ್ ಗಾಯಗೊಂಡರು. ಅವರನ್ನು ತಕ್ಷಣವೇ ಮೆಂಧಾರ್‌ನಲ್ಲಿರುವ ಉಪ-ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಮಾರ್ಗಮಧ್ಯದಲ್ಲಿಯೇ ಅವರು ಸಾವನ್ನಪ್ಪಿದ್ದರು ಎಂದು ಸೇನಾಮೂಲಗಳು ಹೇಳಿವೆ.
ಮರಣೋತ್ತರ ಪರೀಕ್ಷೆಯ ನಂತರ ಅವರ ದೇಹವನ್ನು ಸೇನೆಗೆ ಹಸ್ತಾಂತರಿಸಲಾಗಿದೆ.
ಸಿಆರ್ ಪಿಸಿಯ ಸೆಕ್ಷನ್ 174 ರ ಅಡಿಯಲ್ಲಿ ಪೊಲೀಸರು ವಿಚಾರಣೆಯ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದಾರೆ. ಸೇನೆಯು ಈ ಕುರಿತು ವಿಚಾರಣೆ ನಡೆಸಲು ತನಿಖಾ ನ್ಯಾಯಾಲಯವನ್ನು ಸಹ ಸ್ಥಾಪಿಸಿದೆ ಎಂದು ಮೂಲಗಳು ವರದಿ ಮಾಡಿವೆ.