ಭೂಸ್ಥಿರ ಉಪಗ್ರಹದಿಂದ ಸಿಡಿಲಿನ ನಿಖರ ಮಾಹಿತಿ ಸಾಧ್ಯ: ISRO

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಭೂಸ್ಥಿರ ಉಪಗ್ರಹಗಳಿಂದ ಲಭ್ಯವಾಗುವ ಮಾಹಿತಿಯ ಪರಿಣಾಮಕಾರಿ ಬಳಕೆಯಿಂದಾಗಿ ಹವಾಮಾನ ವರದಿಯ ಜತೆಗೆ, ಸಿಡಿಲಿನ ನಿಖರ ಮಾಹಿತಿ ನೀಡಬಹುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹೇಳಿದೆ.

ಭೂಮಿ ಮೇಲಿನ ಅಧ್ಯಯನ ಕೇಂದ್ರದಲ್ಲಿ ಉಪಗ್ರಹ ಕಳುಹಿಸುವ ಮಾಹಿತಿ ಆಧರಿಸಿ ಮಿಂಚು, ಗುಡುಗು ಹಾಗೂ ಸಿಡಿಲಿನ ಮಾಹಿತಿ ಕಲೆಹಾಕಲಾಗುತ್ತದೆ. ಯಾವ ಸಮಯದಲ್ಲಿ ಇದರ ಪ್ರಮಾಣ ಹೆಚ್ಚು ಹಾಗೂ ಕಡಿಮೆ ಎಂಬುದನ್ನು ಹೇಳಲು ಸಾಧ್ಯವಾಗಿದೆ. ಹೀಗಾಗಿ 2.5 ಗಂಟೆಗೂ ಮೊದಲೇ ಮುನ್ಸೂಚನೆ ನೀಡುವಷ್ಟು ಸಾಮರ್ಥ್ಯ ಹೊಂದಿದೆ’ ಎಂದು ಇಸ್ರೊ ಮಾಹಿತಿ ನೀಡಿದೆ.

ಭೂಮಿಯ ಮೇಲ್ಮೈನ ಟ್ರೊಪೋಸ್ಟಿಯರ್‌ನಲ್ಲಿ ಗಾಳಿ, ತಾಪಮಾನ, ವಿಕರಣಗಳಿಂದಾಗಿ ಉಂಟಾಗುವ ಘರ್ಷಣೆಯಿಂದ ಮಿಂಚು, ಗುಡುಗು, ಸಿಡಿಲು ಉಂಟಾಗುತ್ತದೆ. ಇನ್‌ಸ್ಯಾಟ್‌–3ಡಿ ಉಪಗ್ರಹದ ಮೂಲಕ ಹೊರ ಹೋಗುವ ಲಾಂಗ್‌ವೇವ್‌ ರೇಡಿಯೇಷನ್‌ನ (OLR) ಮಾಹಿತಿಯಲ್ಲಿ ಮಿಂಚಿನ ಲಕ್ಷಣಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.

ಇಸ್ರೊದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (NRSC) ಈ ಮಹತ್ವದ ಸಾಧನೆ ಮಾಡಿದ್ದು, ಹವಾಮಾನ ಮುನ್ಸೂಚನೆಯಲ್ಲಿ ಇದೊಂದು ಮೈಲಿಗಲ್ಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!