ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರಿನಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಯುವಕನಿಗೆ ಗುದ್ದಿ ಎಸ್ಕೇಪ್ ಆಗಿರುವ ಆರೋಪವನ್ನು ಗಿಚ್ಚಿಗಿಲಿಗಿಲಿ ವಿನ್ನರ್ ಚಂದ್ರಪ್ರಭಾ ಎದುರಿಸುತ್ತಿದ್ದಾರೆ.
ಯುವಕ ಮಾಲತೇಶ್ ಚಿಕ್ಕಮಗಳೂರು ಕೆಎಸ್ಆರ್ಟಿಸಿ ನಿಲ್ದಾಣದ ಬಳಿ ತೆರಳುತ್ತಿದ್ದಾಗ ಚಂದ್ರಪ್ರಭಾ ಕಾರು ಆತನಿಗೆ ಡಿಕ್ಕಿ ಹೊಡೆದಿದೆ. ಕನಿಷ್ಠ ಸೌಜನ್ಯವೂ ತೋರದೆ ಚಂದ್ರಪ್ರಭಾ ಎಸ್ಕೇಪ್ ಆಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಸಿಸಿಟಿವಿ ಫೂಟೇಜ್ ಕೂಡ ದೊರೆತಿದೆ. ಮಾಲತೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕ್ಕಮಗಳೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಚಂದ್ರಪ್ರಭಾ ಮಾತನಾಡಿದ್ದು, ಬೈಕ್ ಸವಾರ ಮಾಲತೇಶ್ ತುಂಬಾ ಕುಡಿದಿದ್ದ, ಆತನೇ ಬಂದು ನನ್ನ ಕಾರ್ಗೆ ಡಿಕ್ಕಿ ಹೊಡೆದ. ನಾನೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.